Gudibande : ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶಿವಾಜಿ ಜಯಂತಿ (Shivaji Jayanti) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೇಡ್-2 ತಹಶೀಲ್ದಾರ್ ಮಹೇಶ್ ಸವದ ಪತ್ರಿ ” ಛತ್ರಪತಿ ಶಿವಾಜಿ ಬಾಲ್ಯದಿಂದಲೇ ಸ್ವತಂತ್ರ ಸಾಮ್ರಾಜ್ಯ ಕಟ್ಟಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಮಹಾನ್ ನಾಯಕ. ಇವರ ಧೈರ್ಯ, ಸಾಹಸವನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿವಾಜಿ ತಾಯಿ ಜೀಜಾಬಾಯಿ ಅವರ ಸಂಸ್ಕಾರ, ಸಂಸ್ಕೃತಿ, ದಿಟ್ಟತನವನ್ನು ತಾಯಂದಿರು ತಿಳಿದುಕೊಳ್ಳಬೇಕು. ಜೊತೆಗೆ, ಮಕ್ಕಳಿಗೂ ಸಂಸ್ಕಾರ ಹಾಗೂ ಶೌರ್ಯದ ಬಗ್ಗೆ ತಿಳಿಸಿಕೊಡಬೇಕು” ಎಂದು ಹೇಳಿದರು.
ಕಂದಾಯ ಇಲಾಖೆಯ ನೌಕರರಾದ ಪುನೀತ್ ಕನ್ನಡಿಗ, ವಿದ್ಯಾಪವರ್, ಭಾರ್ಗವಿ, ಮುಖಂಡರಾದ ದೇವರಾಜು, ಕೊಂಡಪ್ಪ, ಎಂ.ಸಿ. ಶ್ರೀನಿವಾಸ್ ಉಪಸ್ಥಿತರಿದ್ದರು