Gudibande : ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ್ವಲ್ಲಿ SSLC ಪರೀಕ್ಷಾ ಸಿದ್ಧತಾ ಪೂರ್ವಭಾವಿ ಸಭೆ (Exam preliminary meeting) ನಡೆಸಲಾಯಿತು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ ಮಾತನಾಡಿ “ಮಾರ್ಚ್ 25 ರಿಂದ ಏ. 6ರವರೆಗೆ ಪರೀಕ್ಷೆ ನಡೆಯಲಿದ್ದು ತಾಲ್ಲೂಕಿನಲ್ಲಿ ಒಟ್ಟು 709 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 336 ವಿದ್ಯಾರ್ಥಿ ಹಾಗೂ 373 ವಿದ್ಯಾರ್ಥಿನಿಗಳು, ಖಾಸಗಿ 7 ಹಾಗೂ ಖಾಸಗಿ ಪುನರಾವರ್ತಿತ 9 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 12 ಸರ್ಕಾರಿ, 1 ಅನುದಾನಿತ ಹಾಗೂ 2 ವಸತಿ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಮುಖವಾದ ಘಟ್ಟ. ಈಗಾಗಲೇ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದುತ್ತಿದ್ದಾರೆ. ಆದರೆ ಕೆಲವರಿಗೆ ಪರೀಕ್ಷೆ ಎಂದ ಕೂಡಲೇ ಭಯವಿರುತ್ತದೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಭಯವಿಲ್ಲದೇ ಪರೀಕ್ಷೆ ಎದುರಿಸಬೇಕು” ಎಂದು ತಿಳಿಸಿದರು.
ಪರೀಕ್ಷೆಯ ಉಸ್ತುವಾರಿಯನ್ನು ಬಿಇಒ ಮುನೇಗೌಡ ವಹಿಸಲಿದ್ದಾರೆ. ನೋಡಲ್ ಅಧಿಕಾರಿಯಾಗಿ ಇಸಿಒ ಚಂದ್ರಶೇಖರ್ ಕೆಲಸ ನಿರ್ವಹಿಸಲಿದ್ದಾರೆ. ಪರೀಕ್ಷಾ ಕಾರ್ಯಕ್ಕೆ 2 ಸ್ಥಾನಿಕ ಜಾಗೃತ ದಳ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.