Gudibande : ಗುಡಿಬಂಡೆ ತಾಲ್ಲೂಕಿನ ಉಲ್ಲೋಡು (Ullodu) ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮಂಗಳವಾರ ವಿಶೇಷ ಏಳು ದಿನಗಳ NSS ಶಿಬಿರ (NSS Camp) ಹಮ್ಮಿಕೊಳ್ಳಾಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಆಫ್ಜಲ್ ಬಿಜಲಿ “NSS ಶಿಬಿರಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ, ಗ್ರಾಮೀಣ ಜನರ ಜೊತೆ ಬೆಸೆಯುವಾಗ, ಸ್ವಚ್ಛತೆ, ಜನಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿವವರಿಗೆ ನಾಯಕತ್ವದ ಗುಣ ಬರುತ್ತದೆ. ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸಿದರಿಗೆ ವಿಶೇಷವಾಗಿ ಮುಂದಿನ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೆ ಮೀಸಲಾತಿ ನೀಡಲಿದೆ. ಇದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಹೆಚ್ಚಾಗಿ, ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗಿಯಾಗಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಶಿಬಿರಾಧಿಕಾರಿ ಕೆ.ಎಂ.ನಯಾಜ್ ಅಹಮದ್, ಉಪನ್ಯಾಸಕರಾದ ಕಾಂತರಾಜು, ಅದಿನಾರಾಯಣ, ಶಿವಕುಮಾರ್ ಉಪಸ್ಥಿತರಿದ್ದರು.