Gudibande : ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮದ ಲಕ್ಷ್ಮಿ ಆದಿನಾರಾಯಣಸ್ವಾಮಿ (Yellodu Adinarayanaswamy Temple) ದೇವಸ್ಥಾನದ ಬಳಿ ₹6 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಡಾ.ಕೆ. ಸುಧಾಕರ್ (K Sudhakar) ಅವರು ಬುಧವಾರ ಭೂಮಿ ಪೂಜೆ (Bhoomipooja) ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ. ಸುಧಾಕರ್ “ಕೇಂದ್ರ ಸರ್ಕಾರ ಮಂಡಿಸಿದ ಈ ಬಾರಿಯ ಬಜೆಟ್‌ನಲ್ಲಿ ವಾರ್ಷಿಕ ₹12 ಲಕ್ಷದವರೆಗಿನ ಆದಾಯ ಪಡೆಯುತ್ತಿರುವವರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಡಲಾಗಿದ್ದು ಇದರಿಂದ ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಅವರ ಆರ್ಥಿಕ ಜೀವನ ಸುಧಾರಿಸಲು ಸಹಕಾರಿಯಾಗಲಿದೆ. ರಾಜ್ಯ ಸರ್ಕಾರದಿಂದ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಉಚಿತ ಮನೆಗಳು ಇಲ್ಲ, ರಸ್ತೆಗಳ ನಿರ್ಮಾಣವಿಲ್ಲ. ಇತರ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಮಾಡದೆ ಇಡೀ ರಾಜ್ಯ ದಿವಾಳಿಯತ್ತ ಸಾಗಿದೆ. ಇನ್ನು ಮುಂದಿನ ರಾಜ್ಯ ಬಜೆಟ್‌ನಲ್ಲಿ ಈ ಸರ್ಕಾರ ಅದೆಷ್ಟು ಲಕ್ಷ ಕೋಟಿಯನ್ನು ರಾಜ್ಯದ ಜನರ ಮೇಲೆ ಹೊರಿಸಲಿದೆಯೋ ಎಂದು ಕಾದು ನೋಡಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಜೇನಹಳ್ಳಿ ನಾಗರಾಜ್ ರೆಡ್ಡಿ, ಡಿಎನ್ಆರ್ ಮಂಜುನಾಥ್ ರೆಡ್ಡಿ, ದಪ್ಪರ್ತಿ ಮುರಳಿ, ಎಲ್ಲೋಡು ಕೃಷ್ಣಾರೆಡ್ಡಿ, ಲೋಕೇಶ್ ಉಪಸ್ಥಿತರಿದ್ದರು.