23.1 C
Bengaluru
Friday, March 14, 2025

ಹರ್ ಘರ್ ತಿರಂಗಾ ಜಾಗೃತಿ ಅಭಿಯಾನ ಜಾಥಾ

- Advertisement -
- Advertisement -

Gauribidanur : ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹರ್ ಘರ್ ತಿರಂಗಾ (Har Ghar Tiranga) ಜಾಗೃತಿ ಅಭಿಯಾನದ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಜಾಥಾದಲ್ಲಿ ವಿದುರಾಶ್ವತ್ಥ (Vidurashwatha) ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಹರ್ ಘರ್ ತಿರಂಗಾ ಕುರಿತು ಊರಿನ ಪ್ರಮುಖ ರಸ್ತೆಗಳಲ್ಲಿ ಜಾಥಾ (Jatha) ನಡೆಸಿ ದೇಶಪ್ರೇಮ ಮತ್ತು ದೇಶಭಕ್ತಿಯನ್ನು ಬಿಂಬಿಸುವ ಘೋಷಣೆಗಳನ್ನು ಕೂಗುತ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಜಾಥಾವನ್ನು ಉದ್ಘಾಟಿಸಿ ಮಾತಾನಾಡಿದ ಜಿಲ್ಲಾಧಿಕಾರಿ (Deputy Commissioner) ಎನ್.ಎಂ.ನಾಗರಾಜ್ (N M Nagaraj) ” ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ (Azadi Ka Amrit Mahotsav) ಶೀರ್ಷಿಕೆಯಡಿ ಒಂದು‌ ವರ್ಷದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಆಗಸ್ಟ್ 13 ರಿಂದ 15 ರವರೆಗೆ ಪ್ರತಿ ಮನೆಯ ಮೇಲೂ ನಿರಂತರ 72 ಗಂಟೆಗಳ‌ ಕಾಲ ರಾಷ್ಟ್ರಧ್ವಜ ಹಾರಿಸಿ ಆ ಮೂಲಕ‌ ದೇಶದ ಜನರ ಒಗ್ಗಟ್ಟು ಮತ್ತು ಶಕ್ತಿಯನ್ನು ಪ್ರದರ್ಶಿಸಲು ಹರ್ ಘರ್ ತಿರಂಗಾ ಅಭಿಯಾನಕ್ಕೆ ಸರ್ಕಾರ ಕರೆ ನೀಡಿದೆ. ಆಗಸ್ಟ್ 12 ರಂದುಚಿಕ್ಕಬಳ್ಳಾಪುರ ನಗರದಲ್ಲಿ 5 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.

ತಹಶೀಲ್ದಾರ್ ಎಚ್.ಶ್ರೀನಿವಾಸ್, ತಾ.ಪಂ ಇಒ ಆರ್.ಹರೀಶ್, BEO ಕೆ.ವಿ.ಶ್ರೀನಿವಾಸಮೂರ್ತಿ, ನಗರಸಭೆ ಆಯುಕ್ತರಾದ ಡಿ.ಎಂ.ಗೀತಾ, ಸಮಾಜ ಕಲ್ಯಾಣ ಇಲಾಖೆಯ‌ ಸಹಾಯಕ ‌ನಿರ್ದೇಶಕರಾದ ಮಹದೇವಸ್ವಾಮಿ, ವಿದುರಾಶ್ವತ್ಥ ದೇವಸ್ಥಾನದ ಇಒ ಪಿ.ಎ.ಮರಿರಾಜು, ಪಿಡಿಒ ಎನ್.ಚಂದ್ರಶೇಖರ್ ಕಾರಟಗಿ ಮತ್ತಿತ್ತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!