Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿವಿಧ ಸಾರ್ವಜನಿಕ ಸೌರಸೌಲಭ್ಯಗಳ ಉದ್ಘಾಟನೆ (Inauguration of public solar facilities)ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಮೇಡಿಯಾಸ್‌ನ ಬ್ರಾಂಡ್ ಆ್ಯಂಡ್ ಕಮ್ಯುನಿಕೇಷನ್ ಸಂಸ್ಥೆಯ ನಿರ್ದೇಶಕಿ ರಿಬು ಚೌಧರಿ ” ಡಿಜಿಟಲ್ ಮಾಧ್ಯಮವು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಕ್ತಿ ತುಂಬಲಿದ್ದು ಶಿಕ್ಷಕರಿಗೆ ಪಾಠ ಬೋಧಿಸಲು ಮತ್ತು ಮಕ್ಕಳ ಗ್ರಹಿಕೆಗೆ ಸಲಭವಾಗುತ್ತದೆ. ಈ ನಿಟ್ಟಿನಲ್ಲಿ ಸೆಲ್ಕೊ ಸಂಸ್ಥೆಯ ಸಹಕಾರದೊಂದಿಗೆ ಅಮೇಡಿಯಾಸ್ ಸಾಫ್ಟ್‌ವೇರ್ ಕಂಪನಿಯು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸೌರಶಕ್ತಿಚಾಲಿತ ವಿದ್ಯುನ್ಮಾನ ಶೈಕ್ಷಣಿಕ ವ್ಯವಸ್ಥೆ (ಡಿಇಪಿ)ಯನ್ನು ನಂದಿ ಮತ್ತು ಈರೇನಹಳ್ಳಿ ಗ್ರಾಮಗಳ ಅಂಗನವಾಡಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳಲ್ಲಿ ಅಳವಡಿಸಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮೇಡಿಯಾಸ್ ಸಾಫ್ಟ್‌ವೇರ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿ ಮುಖ್ಯಸ್ಥೆ ನವೀನ್ದ್ ರಶ್ಮಿ, ಸೆಲ್ಕೊ ಸಂಸ್ಥೆಯ ಸಹಾಯಕ ಮಹಾಪ್ರಬಂಧಕ ಕೆ. ಕರಿಸ್ವಾಮಿ, ನಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಿನಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎನ್. ವೆಂಕಟೇಶಪ್ಪ, ನಂದಿ ಗ್ರಾಮ ಪಂಚಾಯಿತಿ ಸದಸ್ಯ ಎನ್. ಆರ್. ಮಂಜುನಾಥ, ಎಸ್‌ಡಿಎಂಸಿ ಅಧ್ಯಕ್ಷ ರಾಮಮೂರ್ತಿ, ಪಿಡಿಒಗಳಾದ ರವಿಕುಮಾರ್, ಮೋಹನ್ ಕುಮಾರ್, ಸಿಆರ್‌ಪಿ. ನಾರಾಯಣಸ್ವಾಮಿ, ಮುಖ್ಯ ಶಿಕ್ಷಕಿ ಎ. ರಾಧಾ, ಸೆಲ್ಕೊ ಸಿಎಸ್‌ಆರ್ ವಿಭಾಗದ ಸಹನಾ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.