Chikkaballpur : ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ (Sir M. Visvesvaraya) ಜಿಲ್ಲಾ ಕ್ರೀಡಾಂಗಣದಿಂದ ವಿಶ್ವ ಮಣ್ಣು ದಿನಾಚರಣೆ (World Soil Day) ಅಂಗವಾಗಿ ಈಶಾ ಫೌಂಡೇಶನ್ (Isha Foundation) ವತಿಯಿಂದ ಮಣ್ಣು ಉಳಿಸಿ (Save Soil) ಅಭಿಯಾನದ ಭಾಗವಾಗಿ ಸೋಮವಾರ ಈಶಾ ಸ್ವಯಂ ಸೇವಕರು, ವಿದ್ಯಾರ್ಥಿಗಳು ನಗರಸಭೆಯವರೆಗೆ, ಅಲ್ಲಿಂದ ನ್ಯಾಯಾಲಯದ ಸಂಕೀರ್ಣ, ಶಿಡ್ಲಘಟ್ಟ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.
ಪಾದಯಾತ್ರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಚಾಲನೆ ನೀಡಿದರು. ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ‘ಮಣ್ಣು ಉಳಿಸಿ, ಮಣ್ಣು ಇಲ್ಲದೆ ಆಹಾರವಿಲ್ಲ’ ಹೀಗೆ ವಿವಿಧ ಕರಪತ್ರಗಳನ್ನು ಹಿಡಿದು ಸಾಗಿದರು.
ಮಣ್ಣು ಉಳಿಸಿ ಎಂದು ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಘೋಷಣೆಗಳನ್ನು ಕೂಗಿದರು. ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.