Chikkaballapur : ಕದಿರಿ (Kadiri) ಹುಣ್ಣಿಮೆಯ ಪ್ರಯುಕ್ತ ತಾಲ್ಲೂಕಿನ ಕುಪ್ಪಹಳ್ಳಿ ಬಳಿಯ ಗೋಪಿನಾಥ ಬೆಟ್ಟದ ಗೋವರ್ಧನಗಿರಿ ಲಕ್ಷ್ಮಿನರಸಿಂಹಸ್ವಾಮಿ, ಜಾಲಾರಿ ಲಕ್ಷ್ಮಿನರಸಿಂಹ, ಚಿಕ್ಕಕಾಡಿಗಾನಹಳ್ಳಿ ಗ್ರಾಮದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವಗಳು (Brahma Rathotsava) ವಿಜೃಂಭಣೆಯಿಂದ ನಡೆದವು.
ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 6 ರಿಂದ ಹೋಮ, ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಬ್ರಹ್ಮರಥೋತ್ಸವದಲ್ಲಿ ಹೂ ಹಣ್ಣು ಮತ್ತು ತೆಂಗಿನಕಾಯಿ ಅರ್ಪಿಸುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿದ್ದರು.
ಚಿಕ್ಕಬಳ್ಳಾಪುರದ ಕನಕ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ತಿರುಕಲ್ಯಾಣೋತ್ಸವ, ಜಾತವಾರ ಗ್ರಾಮದ ಪ್ರಸನ್ನಕೇಶವ ರಥೋತ್ಸವ ನಡೆಯಿತು.