Bagepalli : ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹಾಗೂ ಕಸಬಾ ಹೋಬಳಿಯ 6 ಗ್ರಾಮಗಳಿಗೆ ಜಲಜೀವನ್ ಮಿಷನ್ (Jal Jeevan Mission) ಯೋಜನೆಯಡಿ ನಳನೀರು ಸರಬರಾಜು ಕಾಮಗಾರಿಗೆ ಬುಧವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S N Subbareddy) ಭೂಮಿಪೂಜೆ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು “ಬಯಲುಸೀಮೆಯ ಭಾಗದಲ್ಲಿ ಮಳೆಯಿಂದ ಮಾತ್ರ ಜನ ಹಾಗೂ ಜಾನುವಾರುಗಳಿಗೆ ನೀರು ಸಿಗಲಿದೆ. ಕೊಳವೆಬಾವಿಗಳಿಂದ ಪೈಪ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು. ಕೃಷ್ಣಾನದಿಯ ಬಿ ಸ್ಕೀಂ ಪ್ರಕಾರದಂತೆ ತಾಲ್ಲೂಕಿಗೆ ನೀರು ಸರಬರಾಜು ಮಾಡುವ ಹಕ್ಕು ಇದೆ. ಬಾಗೇಪಲ್ಲಿ ಪಟ್ಟಣಕ್ಕೆ 10 ಕಿ.ಮೀ ದೂರದಲ್ಲಿ ಆಂಧ್ರಪ್ರದೇಶದ ಚಿಲಮತ್ತೂರು, ಲೇಪಾಕ್ಷಿ ಕಡೆಗಳಿಗೆ ನೀರು ಸರಬರಾಜು ಮಾಡಲಾಗಿದೆ. ಸರ್ಕಾರ ಕೂಡಲೇ ಆಂಧ್ರಪ್ರದೇಶದ ಸರ್ಕಾರದ ಜತೆ ಚರ್ಚೆ ಮಾಡಿ ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು. ತಾಲ್ಲೂಕಿನ ಹನುಮಂತರಾಯನಪಲ್ಲಿ, ಆಚೇಪಲ್ಲಿ, ಕನಮಕುಂಟಪಲ್ಲಿ, ಮರವಪಲ್ಲಿ ತಾಂಡ, ಪರಗೋಡು ಗ್ರಾಮ ಪಂಚಾಯಿತಿಯ ಕೊತ್ತಪಲ್ಲಿ, ತೀಮಾಕಲಪಲ್ಲಿ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ₹3 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೆ ನಳ ನೀರು ಸರಬರಾಜು ಮಾಡಿಸಲಾಗುವುದು”ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ತಾಂತ್ರಿಕ ಇಲಾಖೆ ಮಹೇಶ್, ಪರಗೋಡು ಪಿಡಿಒ ನಾಗಮಣಿ, ಪಾರ್ಥಸಾರಥಿ, ಶಿವಪ್ಪ, ಲಕ್ಷ್ಮಿನರಸಿಂಹಪ್ಪ, ಗುಂಟಿಗಾನಪಲ್ಲಿ ಮಂಜುನಾಥರೆಡ್ಡಿ, ಶ್ರೀರಾಮನಾಯಕ್, ಸದಾಶಿವಾರೆಡ್ಡಿ, ಶ್ರೀನಿವಾಸರೆಡ್ಡಿ, ಶಿವಪ್ಪ, ಕೊತ್ತಪಲ್ಲಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
[…] post ಜಿಲ್ಲೆಗೆ ಕೃಷ್ಣ ನದಿ ನೀರು : ಶಾಸಕರ ಮನವಿ appeared first on […]