Chintamani : ಗುರುಪೂರ್ಣಿಮೆ ಅಂಗವಾಗಿ ಚಿಂತಾಮಣಿ ತಾಲೂಕ್ಕಿನ ಕೈವಾರದ ಯೋಗಿ ನಾರೇಯಣ ಮಠದಲ್ಲಿ (Kaiwara Yogi Nareyana Mutt) ಸಂಗೀತೋತ್ಸವ (Sangeetotsava) ಹಮ್ಮಿಕೊಳ್ಲಲಾಗಿತ್ತು.
ಸಂಗೀತೋತ್ಸವದಲ್ಲಿ ನೂರಾರು ಕಲಾವಿದರಿಂದ ಯೋಗಿನಾರೇಯಣ ತಾತಯ್ಯ ವಿರಚಿತ ಬೋಧನಾ ಕೃತಿಗಳ ಗೋಷ್ಠಿ ಗಾಯನ ನಡೆಸಿದರು. ವಿವಿಧ ಕಲಾವಿದರಿಂದ ನಾದಸ್ವರ, ಸ್ಯಾಕ್ಸೋಪೋನ್, ತವಿಲ್ ನುಡಿಸುವ ಮೂಲಕ ತಮ್ಮ ಕಲಾಸೇವೆ ಸಮರ್ಪಿಸಿದರು. ವಿವಿಧ ಭಜನಾ ಮಂಡಳಿಗಳಿಂದ ನಾಮಸಂಕೀರ್ತನೆ ನಡೆಯಿತು.
ಬೆಂಗಳೂರಿನ ನಯನಾ ರಮೇಶ್ ಮತ್ತು ವಿ.ಹರ್ಷಿಣಿ ತಂಡದ ಭರತನಾಟ್ಯ ಪ್ರೇಕ್ಷಕರನ್ನು ಸೆಳೆಯಿತು. ಕದರಿಯ ದಸ್ತುಗೀರ್ ಸಾಬ್-ಹರಿಕಥೆ, ಎನ್.ಆರ್.ಜ್ಞಾನಮೂರ್ತಿ ಹರಿಕಥೆ, ಪಾಳ್ಯ ಬೈರಾರೆಡ್ಡಿ ಹರಿಕಥೆ, ಮದ್ದೆರಿ ಮುನಿರೆಡ್ಡಿ ಹಾಗೂ ಮಾಡಿಕೆರೆ ಅಪ್ಪಿರೆಡ್ಡಿ ಅವರಿಂದ ನಾಟಕ, ಗೌನಪಲ್ಲಿಯ ಜಿ.ಎಲ್.ನರಸಿಂಹಮೂರ್ತಿ ತಂಡದಿಂದ ಭೀಮ-ದುರ್ಯೋಧನ-ಶಕುನಿ ನಾಟಕಾಭಿನಯ ನಡೆದವು.