Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅಗಲಿದ ನಾಡೋಜ ಕಮಲಾ ಹಂಪನಾ (Kamala Hampana) ಅವರಿಗೆ ಶ್ರದ್ಧಾಂಜಲಿ (Shradhanjali) ಅರ್ಪಿಸಲಾಯಿತು.
ಚಿಕ್ಕಬಳ್ಳಾಪುರ ಕಸಾಪ ಕಚೇರಿಯಲ್ಲಿ ಕಮಲಾ ಹಂಪನಾ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಸಾಪ ಪದಾಧಿಕಾರಿಗಳು ಭಾಗವಹಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಗಳನ್ನು ನೆನೆದು ಅವರ ಆತ್ಮಕ್ಕೆ ಶಾಂತಿ ಕೋರಿದರು .
ಶಿಡ್ಲಘಟ್ಟ :

ಶಿಡ್ಲಘಟ್ಟ ನಗರದ ವಾಸವಿ ಶಾಲೆಯಲ್ಲಿ ಶನಿವಾರ ದಿ.ಕಮಲಾ ಹಂಪನಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಶಿಡ್ಲಘಟ್ಟ ತಾಲ್ಲೂಕು ಘಟಕದಿಂದ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಗೌರಿಬಿದನೂರು :

ನಗರದ ಗಾಂಧಿ ವೃತ್ತದಲ್ಲಿ ದಿ ಕಮಲಾ ಹಂಪನಾ ಅವರಿಗೆ ನುಡಿನಮನ ಮತ್ತು ಸಂತಾಪ ಸಭೆ ನಡೆಸಲಾಯಿತು.