Chikkaballapur : ಕಾರ್ತಿಕ ಮಾಸದ ಕಡೆ ಸೋಮವಾರದ (Karthika Somavaara) ಪ್ರಯುಕ್ತ ಜಿಲ್ಲೆಯಾದ್ಯಂತ ಅನೇಕ ದೇವಾಲಯಗಳಲ್ಲಿ ವಿಜೃಂಭಣೆಯ ದೀಪೋತ್ಸವ (Deepotsava) ಹಾಗೂ ಜನರು ಬೆಳಿಗ್ಗೆಯಿಂದಲೇ ಸಡಗರ ಸಂಭ್ರಮದಿಂದ ದೇಗುಲಗಳತ್ತ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದುರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ, ನಗರದ ಎಂ.ಜಿ. ರಸ್ತೆಯಲ್ಲಿರುವ ಮರುಳಸಿದ್ದೇಶ್ವರ, ಕಂದವಾರ ಬಾಗಿಲು ರಸ್ತೆಯ ವೆಂಕಟರಮಣ ಸ್ವಾಮಿ, ಕೋಟೆ ಚನ್ನಕೇಶವ ಸ್ವಾಮಿ, ವರಸಿದ್ಧಿ ವಿನಾಯಕ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಗೌರಿಬಿದನೂರು:

ಕಾರ್ತಿಕ ಮಾಸದ ಕೊನೆಯ ಸೋಮವಾರದ ಅಂಗವಾಗಿ ಗೌರಿಬಿದನೂರು ನಗರದ ಹಿರೇಬಿದನೂರಿನಲ್ಲಿನ ರಾಮಲಿಂಗೇಶ್ವರ ಸ್ವಾಮಿಯ 26ನೇ ರಥೋತ್ಸವವು ಮತ್ತು ಕಲ್ಲೂಡಿ ಗ್ರಾಮದ ಹೊರವಲಯದಲ್ಲಿನ ಕಲ್ಲಂತರಾಯ ಗುಟ್ಟೆಯಲ್ಲಿನ ಕಲ್ಲಿನಾಥೇಶ್ವರ ಸ್ವಾಮಿ ರಥೋತ್ಸವವು ಅದ್ದೂರಿಯಾಗಿ ನಡೆಯಿತು.
ಚಿಂತಾಮಣಿ :

ಚಿಂತಾಮಣಿ ನಗರದ ನಾಗನಾಥೇಶ್ವರಸ್ವಾಮಿ ದೇವಾಲಯ ಮತ್ತು ಹರಿಹರೇಶ್ವರ ಸ್ವಾಮಿ ದೇವಾಲಯಗಳಲ್ಲಿ, ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಉಪ್ಪರಪೇಟೆ ಗ್ರಾಮದಲ್ಲಿ ನೆಲೆಸಿರುವ ಸೃಷ್ಟೀಶ್ವರಸ್ವಾಮಿ ದೇವಾಲಯದಲ್ಲಿ, ಕೈವಾರದ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ, ಮಹಾ ಕೈಲಾಸಗಿರಿ ಗುಹಾಂತರ ದೇವಾಲಯ, ಮುರುಗ ಮಲೆಯ ಮುಕ್ತೀಶ್ವರ ದೇವಾಲಯ, ಆಲಂಬಗಿರಿ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಿಡ್ಲಘಟ್ಟ :

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕಾಳನಾಯಕನಹಳ್ಳಿಯಲ್ಲಿನ ಬಸವೇಶ್ವರ ಸ್ವಾಮಿ ದೇವಾಲಯದ ದ್ವಿತೀಯ ವಾರ್ಷಿಕೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
ಚೇಳೂರು :

ಚೇಳೂರಿನ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ದೀಪೋತ್ಸವ ನಡೆಯಿತು.