20.9 C
Bengaluru
Friday, December 13, 2024

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಮತ್ತು ಶಿಡ್ಲಘಟ್ಟ ತಾಲ್ಲೂಕು ಕಸಾಪ (Kannaada Sahitya Parishat – KaSaPa) ವತಿಯಿಂದ ಆಯೋಜಿಸಿದ್ದ ಲಿಖಿತ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ (Competition Winners) ವಿಜೇತರಾದ ವಿದ್ಯಾರ್ಥಿಗಳು ಮತ್ತು SSLCಯ ಕನ್ನಡ ಭಾಷಾ ಪರೀಕ್ಷೆಯಲ್ಲಿ 125 ಕ್ಕೆ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಅವರ ಉತ್ಕೃಷ್ಟ ದೇಶಪ್ರೇಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಕಾರ್ಯಕ್ರಮದ‌ ಮೂಲಕ ತಿಳಿಸಿಕೊಡುತ್ತಿರುವುದು ಅಭಿನಂದನೀಯ ಕಾರ್ಯ ಎಂದು ಅವರು ತಿಳಿಸಿದರು.

 ಭಾರತ ದೇಶದ ಪ್ರತಿಯೊಬ್ಬ ಪ್ರಜೆಯು ಅಮೃತಮಹೋತ್ಸವದ ಅಂಗವಾಗಿ ಆಚರಣೆ ಮಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಮತ್ತು ಈ ವರ್ಷದ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯನ್ನು ನೆನೆಪಿನಲ್ಲಿ ಉಳಿಯುವ ರೀತಿಯಲ್ಲಿ ಆಚರಿಸಬೇಕು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯಬೇಕು ಎಂದರು.

ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಶಿಡ್ಲಘಟ್ಟ ಕಸಾಪ ಸ್ವಾತಂತ್ರ್ಯದ ಅಮೃತಮಹೋತ್ಸವದ ನೆನಪಿನಲ್ಲಿ ಈಗಾಗಲೇ ತಾಲ್ಲೂಕಿನಾದ್ಯಂತ ವಿಶೇಷವಾದ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುತ್ತಿದೆ. ತಾಲ್ಲೂಕಿನ ದೇಶಭಕ್ತರಹಳ್ಳಿಯ ದೇಶ ಪ್ರೇಮ ಮತ್ತು ನಮ್ಮ ತಾಲ್ಲೂಕಿನ ದೇಶಪ್ರೇಮಿಗಳು ಜವಾಬ್ದಾರಿ ಸರ್ಕಾರಕ್ಕಾಗಿ ನಡೆಸಿರುವ ಹೋರಾಟ, ವೀರಮರಣವನ್ನು ಅಪ್ಪಿದ ಎಲ್ಲಾ ಹೋರಾಟಗಾರರನ್ನು ನೆನೆಯಲೇಬೇಕು ಎಂದರು.

ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡದ ನೆಲದ ಹೋರಾಟದ ಪರಿ ಅನನ್ಯವಾದುದು. ವಿದುರಾಶ್ವತ್ಥದ ಗೋಲಿಬಾರ್ ಪ್ರಕರಣ, ಶಿವಪುರದ ಧ್ವಜ ಸತ್ಯಾಗ್ರಹ, ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟ, 1550 ರ ರಾಣಿ ಅಬ್ಬಕ್ಕನಿಂದ ಪ್ರಾರಂಭವಾಗಿ 1948 ರ ರಜಾಕಾರ ಹೋರಾಟದವರಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಕಾರ್ಯಶೈಲಿ ನಿಜಕ್ಕೂ ರೋಮಾಂಚಕಾರಿಯಾಗಿದೆ ಎಂದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪ್ರಾಂಶುಪಾಲ ಶಂಭುಲಿಂಗೇಶ್ ಮಾತನಾಡಿದರು.

ಲಿಖಿತ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ, ಪ್ರಮಾಣಪತ್ರ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ರ ಚಿತ್ರಪಟವನ್ನು ಹಾಗೂ 2022 ನೇ ಸಾಲಿನ ಎಸ್ಸೆಸ್ಸೆಲ್ಸಿ ಕನ್ನಡ ಭಾಷೆಯ ಪರೀಕ್ಷೆಯಲ್ಲಿ 125 ಕ್ಕೆ 125 ಅಂಕ ಗಳಿಸಿದ 13 ವಿದ್ಯಾರ್ಥಿಗಳಿಗೆ ಕನ್ನಡ ರತ್ನಕೋಶ ಮತ್ತು ಪ್ರಮಾಣಪತ್ರವನ್ನು ಕಸಾಪ ವತಿಯಿಂದ ನೀಡಲಾಯಿತು.

 ಕಸಾಪ ಜಿಲ್ಲಾ ಪದಾಧಿಕಾರಿ ಎಸ್.ಸತೀಶ್, ತಾಲ್ಲೂಕು ಗೌರವ ಕಾರ್ಯದರ್ಶಿ ಕೆ.ಮಂಜುನಾಥ್, ಉಪನ್ಯಾಸಕರಾದ ಡಿ.ಲಕ್ಷ್ಮಯ್ಯ, ಶಿವಾರೆಡ್ಡಿ, ಲೋಕೇಶ್, ಶ್ರೀನಿವಾಸಾಚಾರಿ, ದೀಪಕ್, ಮುನಿರಾಜು, ಅಲೀಂಸಾಹೇಬ್, ಚಂದ್ರಶೇಖರ, ಶ್ರೀಧರ್, ಶಿಕ್ಷಕ ಬೈರಾರೆಡ್ಡಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಲಿಖಿತ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು :

ಪ್ರೌಢಶಾಲಾ ಹಂತ :

ಎಂ.ವಿ.ಚಂದ್ರ (ಪ್ರಥಮ) ಸ.ಪ್ರೌ.ಶಾಲೆ, ಮಳಮಾಚನಹಳ್ಳಿ

ಜಿ.ವಿ.ವರ್ಷಿಣಿ (ದ್ವಿತೀಯ) ಸ.ಪ್ರೌ.ಶಾಲೆ, ದ್ಯಾವಪ್ಪನಗುಡಿ

ಎಸ್.ಯಶಸ್ಸಿನಿ (ತೃತೀಯ), ಡಾಲ್ಪಿನ್ ಪಬ್ಲಿಕ್ ಶಾಲೆ, ಶಿಡ್ಲಘಟ್ಟ.

ಭಾರತ ಸ್ವಾತಂತ್ರ್ಯ ಹೋರಾಟದ ಆಶಯಗಳು ಮತ್ತು ಅನುಷ್ಠಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿಪೂರ್ವ ಹಂತದ ವಿದ್ಯಾರ್ಥಿಗಳು :

ಕೆ.ಎಸ್.ಸ್ನೇಹ (ಪ್ರಥಮ) ಸ್ವಾಮಿ ವಿವೇಕಾನಂದ ಪ.ಪೂ.ಕಾಲೇಜು, ಮಳ್ಳೂರು.

ಡಿ.ಎನ್.ನಾಗಮಣಿ (ದ್ವಿತೀಯ) ಎಂ.ಡಿ.ಆರ್.ಪ.ಪೂ.ಕಾಲೇಜು, ಗೊರ್ಲಗುಮ್ಮನಹಳ್ಳಿ

ಕೆ.ಮಾನಸ (ತೃತೀಯ) ಅಕ್ಷರ. ಪ.ಪೂ.ಕಾಲೇಜು, ಶಿಡ್ಲಘಟ್ಟ

ಭಾರತ ಸ್ವಾತಂತ್ರ್ಯ ಹೋರಾಟದ ಆಶಯಗಳು ಮತ್ತು ಸಂವಿಧಾನದ ಆಶಯಗಳು ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಹಂತದ ವಿದ್ಯಾರ್ಥಿಗಳು :

ಜೆ.ವಿದ್ಯಾಶ್ರೀ (ಪ್ರಥಮ), ಸ.ಪ್ರ.ದರ್ಜೆ.ಕಾಲೇಜು ,ಶಿಡ್ಲಘಟ್ಟ.

ಕೆ.ವಿ.ನಮ್ರತ (ದ್ವಿತೀಯ) ಸ.ಪ್ರ.ದರ್ಜೆ. ಕಾಲೇಜು, ಶಿಡ್ಲಘಟ್ಟ

ವಿ ಮೋಹನ್ (ತೃತೀಯ) ಸ.ಪ್ರ.ದರ್ಜೆ.ಕಾಲೇಜು, ಶಿಡ್ಲಘಟ್ಟ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
Latest news
- Advertisement -
Related news
- Advertisement -
error: Content is protected !!