Chintamani : ಚಿಂತಾಮಣಿ ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿಯ ಕೋಟಗಲ್ ಶಿಂಗರೇಪಲ್ಲಿ ಮಜರಾ ರಾಗುಟ್ಟಹಳ್ಳಿಯಲ್ಲಿ ಖಾದ್ರಿ ಲಕ್ಷ್ಮಿನರಸಿಂಹ (Khadri Lakshminarasimha) ರಥೋತ್ಸವ (Rathotsava) ಬುಧವಾರ ವಿಜೃಂಭಣೆಯಿಂದ ನಡೆಯಿತು.
ರತೋತ್ಸವದ ಪ್ರಯುಕ್ತ ದೇವರಿಗೆ ಹೋಮ, ಹೂವಿನ ಅಲಂಕಾರ, ಅಭಿಷೇಕ, ಪ್ರಧಾನಪೂಜೆ, ಕಳಶ ಸ್ಥಾಪನೆ, ನವಗ್ರಹ ಪೂಜೆ, ನಾಗದೇವರ ಪೂಜೆ ನಡೆದವು. ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಾಲಯದ ಧರ್ಮದರ್ಶಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ರಥವನ್ನು ಎಳೆದರು. ತೇರಿಗೆ ಬಾಳೆಹಣ್ಣು ಮತ್ತು ಧವನ ಸಮರ್ಪಿಸಿದರು.
ಈ ರಥೋತ್ಸವದ ಭಾಗವಾಗಿ ಜಾನುವಾರುಗಳ ಜಾತ್ರೆ ನಡೆದ್ದಿದ್ದು ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಜನರು ರಾಸು ಜಾತ್ರೆಗೆ ಬಂದು ಭಾಗವಹಿಸುತ್ತಾರೆ. ಉತ್ತಮ ರಾಸುಗಳಿಗೆ ದೇವಾಲಯದಿಂದ ಬಹುಮಾನಗಳು ನೀಡಲಾಗುತ್ತವೆ.