Home News Kolar ಕೋಲಾರ ಜಿಲ್ಲೆಯಾದ್ಯಂತ ಕನಕದಾಸ ಜಯಂತಿ ಆಚರಣೆ

ಕೋಲಾರ ಜಿಲ್ಲೆಯಾದ್ಯಂತ ಕನಕದಾಸ ಜಯಂತಿ ಆಚರಣೆ

0
363
Kanakadasa Jayanthi Kolar

Kolar : ಕೋಲಾರ ಜಿಲ್ಲೆಯಾದ್ಯಂತ ದಾಸಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು (Kanakadasa Jayanthi) ಅದ್ಧೂರಿಯಾಗಿ ಆಚರಿಸಲಾಯಿತು.

Kanakadasa Jayanthi Kolar

ಕೋಲಾರ ನಗರದ ಕನಕ ಮಂದಿರ ಮುಂಭಾಗದ ಕನಕ ವೃತ್ತದಲ್ಲಿ ಜಿಲ್ಲಾ ಕುರುಬರ ಸಂಘ, ಸಮುದಾಯದ ವಿವಿಧ ಸಂಘಗಳು ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಸೋಮವಾರ ನಡೆದ 537ನೇ ಕನಕದಾಸರ ಜಯಂತ್ಯುತ್ಸವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀನಿವಾಸಪುರ :

Kanakadasa Jayanthi Srinivaspura

ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕನಕ ಸಮುದಾಯ ಭವನದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತ, ಕುರುಬ ಸಂಘದಿಂದ ಕನಕದಾಸರ 537ನೇ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುಳಬಾಗಿಲು :

Kanakadasa Jayanthi Mulbagal

ಮುಳಬಾಗಿಲು ತಾಲ್ಲೂಕಿನ ಶಾಲಾ ಕಾಲೇಜುಗಳು ಹಾಗೂ ಎಲ್ಲಾ ಸರ್ಕಾರಿ ಕಚೇರಿ ಮತ್ತಿತರರ ಕಡೆಗಳಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಸೋಮವಾರ ಸರಳವಾಗಿ ಆಚರಿಸಲಾಯಿತು.

ಕೆಜಿಎಫ್‌ :

Kanakadasa Jayanthi KGF

ಕೆಜಿಎಫ್‌ ನಗರದ ರಾಬರ್ಟಸನ್‌ ಪೇಟೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ಕುರುಬ ಸಮುದಾಯದ ವತಿಯಿಂದ ಸೋಮವಾರ 537ನೇ ಕನಕದಾಸರ ಜಯಂತ್ಯುತ್ಸವನ್ನು ಆಚರಿಸಲಾಯಿತು.

ಬಂಗಾರಪೇಟೆ :

Kanakadasa Jayanthi Bangarapete

ಬಂಗಾರಪೇಟೆ ಪಟ್ಟಣದ ಪುರಸಭೆ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಸಹಯೋಗದಲ್ಲಿ ಸೋಮವಾರ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!