ಕೋಲಾರದಲ್ಲಿ ಗೌತಮ್ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ : ಸಚಿವ ಬೈರತಿ ಸುರೇಶ್‌

- Advertisement -
- Advertisement -

Kolar : ಕೋಲಾರ ಲೋಕಸಭೆ ಚುನಾವಣೆ (Kolar Lokasbaha Election) ಹಿನ್ನೆಲೆಯಲ್ಲಿ ಕೋಲಾರ ನಗರದ ಹಾಲಿಸ್ಟರ್‌ ಭವನದಲ್ಲಿ ಗುರುವಾರ ಕುರುಬ ಸಮುದಾಯದವರ ಸಭೆ (Kurubha Community Meeting) ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ” ರಾಜಕೀಯ ಪ್ರಾತಿನಿಧ್ಯ ಬಹಳ‌ ಕಡಿಮೆ ಇರುವ ಸಮಾಜ ನಮ್ಮದು. ಇದು ಕೆ.ವಿ.ಗೌತಮ್ ಅಥವಾ ಬೈರತಿ ಸುರೇಶ್ ಚುನಾವಣೆ ಅಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದ ಚುನಾವಣೆ ಎಂದೇ ಮತ ಹಾಕಿ. ಗೌತಮ್ ಗೆದ್ದರೆ ಸಿದ್ದರಾಮಯ್ಯ ಹಾಗೂ ನನ್ನನ್ನು ಗೆಲ್ಲಿಸಿದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷದವರು ಏನೇನೋ ಮಾಡುತ್ತಿದ್ದಾರೆ‌. ಅದಕ್ಕೆ ಅವಕಾಶ ನೀಡದೆ ಸಿದ್ದರಾಮಯ್ಯ ಅವರ ಕೈ ಬಲಪಡಿಸಿ. ಅವರಂಥ ನಾಯಕತ್ವ ಉಳಿಸುವುದು ಎಲ್ಲರ ಕರ್ತವ್ಯ” ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ‌ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡ ಅಂಜನಿ ಸೋಮಣ್ಣ, ಪ್ರಸಾದ್ ಬಾಬು, ಜೆ.ಕೆ.ಜಯರಾಮ್, ರವಿ ರಾಮಸ್ವಾಮಿ, ವೈ.ಶಿವಕುಮಾರ್‌, ತ್ಯಾಗರಾಜ್‌, ಸೋಮಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!