Kolar : ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಗೆ (Lokasabha Election) ಸೋಮವಾರ ನಾಮಪತ್ರಗಳನ್ನು ವಾಪಸ್ ಪಡೆಯಲು (Nomination Withdrawal) ಅಂತಿಮ ದಿನವಾಗಿದ್ದು ಒಬ್ಬ ಅಭ್ಯರ್ಥಿ ನಾಮಪತ್ರ] ವಾಪಸ್ ಪಡೆದರಿಂದ ಅಂತಿಮ ಕಣದಲ್ಲಿ18 ಅಭ್ಯರ್ಥಿಗಳು ಸ್ಪರ್ಧೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಸ್ವತಂತ್ರ ಅಭ್ಯರ್ಥಿ ಮೇಡಿಹಾಳ ಚಂದ್ರಶೇಖರ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಕೆ.ವಿ.ಗೌತಮ್ (ಕಾಂಗ್ರೆಸ್), ಎಂ.ಮಲ್ಲೇಶ್ ಬಾಬು (ಜೆಡಿಎಸ್), ಸುರೇಶ್ ಎಸ್.ಬಿ (ಬಹುಜನ ಸಮಾಜ ಪಕ್ಷ), ಡಿ.ಗೋಪಾಲಕೃಷ್ಣ (ಸೊಷಿಯಲಿಸ್ಟ್ ಪಾರ್ಟಿ-ಇಂಡಿಯಾ), ತಿಮ್ಮರಾಯಪ್ಪ(ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ-ಕರ್ನಾಟಕ), ದೇವರಾಜ ಎ. (ಉತ್ತಮ ಪ್ರಜಾಕೀಯ ಪಾರ್ಟಿ), ಕೆ.ಆರ್.ದೇವರಾಜ (ದೆಹಲಿ ಜನತಾ ಪಾರ್ಟಿ), ಮಹೇಶ್ ಎ.ವಿ (ಕರ್ನಾಟಕ ರಾಷ್ಟ್ರಸಮಿತಿ), ಎಂ.ಸಿ.ಹಳ್ಳಿ.ವೇಣು (ವಿಡುತಲೈ ಚಿರೈತಗಲ್ ಕಚ್ಚಿ), ಸ್ವತಂತ್ರ ಅಭ್ಯರ್ಥಿಗಳಾಗಿ ಕೃಷ್ಣಯ್ಯ ಎನ್, ಎಸ್.ಎನ್.ನಾರಾಯಣಸ್ವಾಮಿ ವಿ., ಎಂ.ಎಸ್.ಬದರಿನಾರಾಯಣ, ಎಂ.ಮುನಿಗಂಗಪ್ಪ, ಆರ್.ರಾಜೇಂದ್ರ, ಆರ್.ರಂಜಿತ್ ಕುಮಾರ್, ಎಂ.ವೆಂಕಟಸ್ವಾಮಿ, ಹೋಳೂರು ಶ್ರೀನಿವಾಸ, ಸುಮನ್.ಎಚ್.ಎನ್ ಕಣದಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.