27.9 C
Bengaluru
Wednesday, February 25, 2026

ಇಂದು Congress ನ ಪ್ರಜಾಧ್ವನಿ-2 ಸಮಾವೇಶ

- Advertisement -
- Advertisement -

Malur : ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ (Kolar Lokasabha Election) ಚುನಾವಣಾ ನಿಮಿತ್ತ ಬುಧವಾರ ಜಿಲ್ಲೆಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ (Rahul Gandhi) ಪ್ರಚಾರ ನಡೆಸಲಿದ್ದಾರೆ. ಸಂಜೆ 4‌ ಗಂಟೆಗೆ ಮಾಲೂರು ಹಾಗೂ ಹೊಸಕೋಟೆ ನಡುವಿನ ಚೊಕ್ಕಂಡಹಳ್ಳಿ ಗೇಟ್‌ ಬಳಿಯ ವಿಶಾಲ ಪ್ರದೇಶದಲ್ಲಿ ‘ಪ್ರಜಾಧ್ವನಿ-2’ (Prajadvani-2) ಕಾಂಗ್ರೆಸ್ ಸಮಾವೇಶ ನಡೆಯಲಿದ್ದು ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ಭಾಗವಹಿಸಲಿದ್ದಾರೆ.

ಸಮಾವೇಶದ ಪೂರ್ವಭಾವಿ ಪರಿಶಿಸಲು ಬಂದಿದ್ದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮಾತನಾಡಿ,‌ “ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳು ಜಾರಿ ಆಗಲ್ಲವೆಂದು ವಿರೋಧಿಗಳು ಟೀಕಿಸಿದ್ದರು. ಈಗ ಎಲ್ಲಾ ಗ್ಯಾರಂಟಿ ಜಾರಿ ಆಗಿವೆ. ದೇಶ ಮಟ್ಟದಲ್ಲೂ ನಮ್ಮ ಪಕ್ಷ ಗ್ಯಾರಂಟಿ ಘೋಷಿಸಿದ್ದು, ಅಧಿಕಾರಕ್ಕೆ ಬಂದರೆ ಈಡೇರಿಸುತ್ತೇವೆ. ರಾಜ್ಯದಲ್ಲಿ ನಾವು 28 ಸ್ಥಾನಗಳನ್ನೂ ಗೆಲ್ಲುತ್ತೇವೆ” ಎಂದು ತಿಳಿಸಿದರು.

ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕೆಪಿಸಿಸಿ ಸದಸ್ಯ ಪ್ರದೀಪ್ ರೆಡ್ಡಿ, ಮುಖಂಡರಾದ ನಂದಿನಿ ಪ್ರವೀಣ್, ಅಂಜನಿ ಸೋಮಣ್ಣ, ಡಾ.ಲೋಹಿತ್, ವಸಂತಾ ಕವಿತಾ, ಮಧುಸೂದನ್, ಎಸ್.ಕೆ.ವೆಂಕಟೇಶ್ ಗೌಡ, ವಿಜಯ ನರಸಿಂಹ, ವೆಂಕಟಸ್ವಾಮಿ, ಬಿ.ಅರ್.ಶ್ರೀನಿವಾಸ್, ಸತೀಶ್, ಕೃಷ್ಣಪ್ಪ ಮತ್ತಿತರರು ಉಪಸ್ಥಿರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!