Kolar : ಕೋಲಾರ ಜಿಲ್ಲೆಯಾದ್ಯಂತ ಮಹಾಯೋಗಿ ವೇಮನ ಜಯಂತಿಯನ್ನು (Yogi Vemana Jayanthi) ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸರಳವಾಗಿ ಆಚರಿಸಲಾಯಿತು.
ಶ್ರೀನಿವಾಸಪುರ :
ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಯೋಗಿ ವೇಮನರ 613ನೇ ಜಯಂತಿ ಆಚರಿಸಲಾಯಿತು.
ಕೆಜಿಎಫ್ :
ಕೆಜಿಎಫ್ ತಾಲ್ಲೂಕು ಆಡಳಿತ ಸೌಧದಲ್ಲಿ ಭಾನುವಾರ ಶಾಸಕಿ ಎಂ.ರೂಪಕಲಾ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು.
ಬಂಗಾರಪೇಟೆ:
ಬಂಗಾರಪೇಟೆ ತಾಲ್ಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿಯಿಂದ ಭಾನುವಾರ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.
ಮಾಲೂರು:
ಮಾಲೂರು ತಾಲ್ಲೂಕಿನ ಕಚೇರಿ ಸಭಾಂಗಣದಲ್ಲಿ ಭಾನುವಾರ ಶಾಸಕ ಕೆ.ವೈ. ನಂಜೇಗೌಡ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ಮಂಡಳಿ ವತಿಯಿಂದ ಮಹಾ ಯೋಗಿ ವೇಮನ ಜಯಂತಿ ಆಚರಿಸಲಾಯಿತು.
ಮುಳಬಾಗಿಲು:
ಮುಳಬಾಗಿಲು ತಾಲ್ಲೂಕು ಆಡಳಿತ ಮತ್ತು ರೆಡ್ಡಿ ವೇಮನ ಸಂಘದ ವತಿಯಿಂದ ಭಾನುವಾರ ತಾಲ್ಲೂಕು ಕಚೇರಿ ಆವರಣದಲ್ಲಿ ವೇಮನರ 613ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.