Chikkaballapur : SSLC ಮತ್ತು ITI ತೇರ್ಗಡೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಮೆಕಾನಿಕಲ್ ಡೀಸೆಲ್, ಫಿಟ್ಟರ್, ವೆಲ್ಡರ್ ಮತ್ತು ಎಲೆಕ್ಟ್ರಿಷಿಯನ್ ತಾಂತ್ರಿಕ ವೃತ್ತಿಗಳಲ್ಲಿ ಶಿಶಿಕ್ಷು ತರಬೇತಿ (Teacher Training) ಪಡೆಯಲು ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಚಿಕ್ಕಬಳ್ಳಾಪುರ ವಿಭಾಗದಲ್ಲಿ ಅರ್ಜಿಗಳನ್ನು (Application) ಆಹ್ವಾನಿಸಲಾಗಿದ್ದು ಆಸಕ್ತರು ವೆಬ್ ಸೈಟ್ www.apprenticeship.org ನಲ್ಲಿ ನೋಂದಾಣಿ ಮಾಡಿಕೊಂಡು ಭರ್ತಿ ಮಾಡಿದ ನಿಗದಿತ ಅರ್ಜಿ ಮತ್ತು ದಾಖಲೆಗಳ ದೃಢೀಕೃತ ನಕಲು ಪ್ರತಿಗಳೊಂದಿಗೆ ನವೆಂಬರ್ 13 ರಂದು ಸಂಜೆ 5ಕ್ಕೆ ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯಲ್ಲಿ ಸಲ್ಲಿಸಬಹುದು.
ಅಭ್ಯರ್ಥಿಗಳಿಗೆ ಅಕ್ಟೋಬರ್ 30, 2023ಕ್ಕೆ 16 ವರ್ಷ ವಯೋಮಿತಿ ಪೂರ್ಣಗೊಂಡಿರಬೇಕು ಎಂದು ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.