Home Sidlaghatta ಕುರುಬ ಸಮುದಾಯದ ಪ್ರತಿಭಾವಂತರಿಗೆ ಪ್ರತಿಭಾಪುರಸ್ಕಾರಕ್ಕೆ ಅರ್ಜಿ

ಕುರುಬ ಸಮುದಾಯದ ಪ್ರತಿಭಾವಂತರಿಗೆ ಪ್ರತಿಭಾಪುರಸ್ಕಾರಕ್ಕೆ ಅರ್ಜಿ

0
245

Sidlaghatta : ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಶ್ರೀಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದಿಂದ ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮಂಜುನಾಥ್, ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದಾಗಿದ್ದು 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 90ಕ್ಕಿಂತಲೂ ಹೆಚ್ಚು ಅಂಕಗಳಿಸಿದ ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 12 ಕಡೆಯ ದಿನವಾಗಿರುತ್ತದೆ ಎಂದರು.

ಅಂಕಪಟ್ಟಿ, ವರ್ಗಾವಣೆ ಪತ್ರದ ಜೆರಾಕ್ಸ್, ವಿಳಾಸ, ಮೊಬೈಲ್ ಸಂಖ್ಯೆ ಬರೆದು ಕಳುಹಿಸಬೇಕು.

ಅಂಚೆ ವಿಳಾಸ:

ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠ,
ಬೆಂಗಳೂರು, ಕನಕ ಭವನ,
10 ನೇ ಅಡ್ಡರಸ್ತೆ,
ಚಂದ್ರಾ ಲೇಔಟ್, 2ನೇ ಹಂತ
ಬೆಂಗಳೂರು 560072.

ಈ ವಿಳಾಸಕ್ಕೆ ನಿಮ್ಮ ದಾಖಲೆ, ಅರ್ಜಿಯನ್ನು ಜುಲೈ 12 ರೊಳಗೆ ಕಳುಹಿಸಬೇಕೆಂದು, ಹೆಚ್ಚಿನ ಮಾಹಿತಿಗಾಗಿ ಕೇಶವ- 9036597972, ಧರೇಶ್-9916974936 ಸಂಪರ್ಕಿಸಲು ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!