Chikkaballapur : ಲಕ್ಷ್ಮಿನರಸಿಂಹಸ್ವಾಮಿ ಜಯಂತಿ (Lakshmi Narasimha Swamy Jayanthi) ಅಂಗವಾಗಿ ಶುಕ್ರವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲಗುರ್ಕಿ ಬಂಡ್ಲಕೆರೆ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ತಿರುಕಲ್ಯಾಣೋತ್ಸವ (TiruKalyanotsava) ನಡೆಯಿತು.
ಲಕ್ಷ್ಮಿನರಸಿಂಹಸ್ವಾಮಿ ಜಯಂತಿ ಅಂಗವಾಗಿ ಕಳೆದ ನಾಲ್ಕೈದು ದಿನಗಳಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು ಕೊನೆಯ ದಿನ ದೇವಾಲಯದಲ್ಲಿ ದೀಪಗಳ ಆರತಿ, ತಿರುಕಲ್ಯಾಣೋತ್ಸವ, ಒಟ್ಲು ಒಡೆಯುವ ಕಾರ್ಯಕ್ರಮ ಜರುಗಿದವು.
ಚಿಕ್ಕಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಗುಂಡ್ಲಗುರ್ಕಿ, ಪುರದಗಡ್ಡೆ, ದಿಬ್ಬೂರುಕಾಡದಿಬೂರು, ಸೊಪ್ಪಹಳ್ಳಿ, ಗಂಗರೆಕಾಲುವೆ, ಸಬ್ಬೇನಹಳ್ಳಿ ರೇಣುಮಾಕಲಹಳ್ಳಿ ಕತ್ತರಿಗುಪ್ಪೆ ಮತ್ತು ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.