Chikkaballapur : ವಕೀಲರ ದಿನಾಚರಣೆ (Lawyer’s Day) ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಶನಿವಾರ ಉಚಿತ ಆರೋಗ್ಯ ತಪಸಣಾ ಶಿಬಿರ (Health Camp) ಹಮ್ಮಿಕೊಳ್ಳಾಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶ ಶಿವಪ್ರಸಾದ್ “ಸಂವಿಧಾನ ಮತ್ತು ವೃತ್ತಿ ಧರ್ಮಕ್ಕೆ ತಲೆಬಾಗಿ ನಡೆಯುತ್ತಾರೊ ಅವರು ನಿಜವಾದ ನ್ಯಾಯವಾದಿಗಳಾಗಬಲ್ಲರೇ ಹೊರತು ಹಣ ಮಾಡುವುದಕ್ಕಾಗಿಯೇ ವಕೀಲರಾಗುವವರಿಂದ ಸಮಾಜಕ್ಕೆ ಉಪಯೋಗವಿಲ್ಲ. ಸಮಾಜದಲ್ಲಿ ಇತರೆ ವೃತಿಗಳಿಗಿಂತ ವಕೀಲ ವೃತ್ತಿಗೆ ಹೆಚ್ಚಿನ ಮಹತ್ವವಿದ್ದು ಬಡವರ, ನೊಂದವರ, ಅಸಹಾಯಕರಿಗೆ ಸೇವೆ ಸಲ್ಲಿಸುವುದು ನನ್ನ ಪ್ರಥಮ ಆದ್ಯತೆ ಆಗಿದೆ ಎಂಬುದನ್ನು ಸದಾ ಕಾಲ ವಕೀಲರು ಮನಸ್ಸಿಗೆ ತಂದುಕೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿರುವ ಬಹುತೇಕ ವಕೀಲರು ಗ್ರಾಮೀಣ ಹಿನ್ನೆಲೆಯಿಂದ ಬಂದವರಾದ ಕಾರಣ ವೃತ್ತಿಯಲ್ಲಿ ನೈಪುಣ್ಯಗಳಿಸಲು ಅವರಿಗೆ ಕಾರ್ಯಾಗಾರಗಳನ್ನು ನಡೆಸುವುದು ಮುಖ್ಯ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಪಂಡಿತ್, ವಕೀಲ ಪಾಪಿರೆಡ್ಡಿ, ಜೈನ್ ಆಸ್ಪತ್ರೆಯ ಡಾ. ಸೋಲಂಕಿ, ಉತ್ತಮಚಂದ್ ಜೈನ್, ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ತಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.