Chikkaballapur : ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಸೋಮವಾರ ಚಿಕ್ಕಬಳ್ಳಾಪುರ ನಗರದ LIC ಕಚೇರಿ ಆವರಣದಲ್ಲಿ ವಿಮಾ ಪ್ರತಿನಿಧಿಗಳಿಗೆ (Representatives) ನೀಡಲಾಗುವ ಕಮಿಷನ್ ಕಡಿತ ವಿರೋಧಿಸಿ ಪ್ರತಿಭಟನೆ (Protest) ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬೆಂಗಳೂರು ವಿಭಾಗೀಯ 2ರ ಪ್ರತಿನಿಧಿಗಳ ಅಧ್ಯಕ್ಷ ರವೀಂದ್ರನಾಥ್ “ವಿಮಾ ಪ್ರತಿನಿಧಿಗಳಿಗೆ ನೀಡಲಾಗುವ ಕಮಿಷನ್ ಕಡಿತ ಮಾಡಿರುವುದು ಜೀವ ವಿಮಾ ಪ್ರತಿನಿಧಿಗಳ ಪಾಲಿಗೆ ಮಾರಕವಾಗಿದ್ದು ಈ ಕೂಡಲೇ ಕಮಿಷನ್ ಕಡಿತವನ್ನು ನಿಲ್ಲಿಸಿ, ಹಳೆ ಕಮಿಷನ್ ಅನ್ನು ಜಾರಿಗೊಳಿಸಬೇಕು. ಹಲವು ವರ್ಷಗಳ ಬೇಡಿಕೆಯಾಗಿರುವ ಪಾಲಿಸಿದಾರರ ಬೋನಸ್ ಹೆಚ್ಚಳದ ಕುರಿತು ಸರ್ಕಾರ ಹಾಗೂ ಐಆರ್‌ಡಿಯವರು ಗಮನಹರಿಸಬೇಕು. ಪಾಲಿಸಿದಾರರಿಗೆ ನೀಡುವ ಕನಿಷ್ಠ ವಿಮಾ ಮೊತ್ತ ₹1 ಲಕ್ಷವನ್ನು ಇದೀಗ ₹2 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದ್ದು ಇದರಿಂದ ಗ್ರಾಮಾಂತರ ಭಾಗದ ಜನತೆಗೆ ಕಷ್ಟವಾಗಲಿದೆ. ಈ ವಿಮಾ ಮೊತ್ತವನ್ನು ಕಡಿಮೆಗೊಳಿಸಬೇಕು” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ಎಲ್‌ಐಸಿ ಶಾಖೆಯ ಅಧ್ಯಕ್ಷ ಬಯ್ಯರೆಡ್ಡಿ, ಝೋನಲ್ ವಿಭಾಗೀಯ ಲಿಯಾಫಿ 2ರ ಅಧ್ಯಕ್ಷ ಟಿ.ಸಿ.ಲಕ್ಷ್ಮಣ್, ಪ್ರತಿನಿಧಿ ಗುರುರಾಜ್, ವೆಂಕಟೇಶ್ ಪ್ರಸಾದ್, ರಾಮಚಂದ್ರರೆಡ್ಡಿ, ಕೆ.ಎಲ್.ವೆಂಕಟೇಶ್, ರಮೇಶ್ ಪಾಲ್ಗೊಂಡಿದ್ದರು.