Sidlaghatta : ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಲೋಕ್ ಅದಾಲತ್ (Lok Adalat) ನಲ್ಲಿ ಒಟ್ಟು 500 ಪ್ರಕರಣಗಳು ಇತ್ಯರ್ಥಗೊಂಡು 98 ಲಕ್ಷ 79 ಸಾವಿರ 366 ರೂ ಪಾವತಿಸಲಾಗಿದೆ.
ಇದನ್ನು ಹೊರತುಪಡಿಸಿ ಬ್ಯಾಂಕಿನ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 1 ಕೋಟಿ 13 ಲಕ್ಷ 50 ಸಾವಿರದ 815 ರೂ ಪಾವತಿಯಾದರೆ ವ್ಯಾಜ್ಯ ಪೂರ್ವ ಪ್ರಕರಣಗಳು ಟ್ರಾಫಿಕ್ ಚಲನ್‌ಗೆ ಸಂಬಂದಿಸಿದಂತೆ 2 ಲಕ್ಷ 51 ಸಾವಿರ ರೂ ಪಾವತಿಯಾಗಿದೆ.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆಹನುಮಂತಪ್ಪ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪೂಜ.ಜೆ ನೇತೃತ್ವದಲ್ಲಿ ನಡೆದ ಅದಾಲತ್‌ನಲ್ಲಿ ವಿವಿಧ ರೀತಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು
ಸಂಧಾನಕಾರರಾಗಿ ವಕೀಲರಾದ ಟಿ.ವಿ.ಚಂದ್ರಶೇಖರಗೌಡ, ಎಂ.ಬಿ.ಲೋಕೇಶ್, ಹಾಜರಿದ್ದರು.