ಲಾರಿ ಟಾಟಾ ಸುಮೊ ವಾಹನ ಡಿಕ್ಕಿ : ಮೂವರ ಸಾವು

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಸೇಠ್‌ದಿನ್ನೆ ಬಳಿಯ ರಾಷ್ಟ್ರೀಯ ಹೆದ್ದಾರಿಯ 44ರಲ್ಲಿ ಭಾನುವಾರ ಲಾರಿಗೆ ಟಾಟಾ ಸುಮೊ ವಾಹನ ಡಿಕ್ಕಿಯಾಗಿ ಮೂವರು ಮೃತ (Lorry Tata Sumo Accident) ಪಟ್ಟಿದ್ದಾರೆ.

ಕೋಲಾರದಿಂದ ಟಾಟಾ ಸುಮೊ ವಾಹನದಲ್ಲಿ 9 ಮಂದಿ ಆಂಧ್ರಪ್ರದೇಶದ ಪೆನುಗೊಂಡಕ್ಕೆ ತೆರಳುತ್ತಿದ್ದು ಸೇಠ್‌ದಿನ್ನೆ ಬಳಿ ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಟಾಟಾ ಸುಮೊ ಚಾಲಕ ಯತ್ನಿಸಿದ್ದಾಗ ಲಾರಿಗೆ ವಾಹನ ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಮೃತರನ್ನು ಬಿಹಾರ ಮೂಲದ ಮುಹಮ್ಮದುಲ್ ಬರಿ (40), ರಜಿಯಾ ಶಾಹಿನ್ (50) ಮತ್ತು ಎಂ.ಡಿ.ಶಾ ಅಲಂ (55) ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!