Chikkabllapur : ಮಕರ ಸಂಕ್ರಾಂತಿ (Makara Sankranti) ಹಬ್ಬವನ್ನು ಜಿಲ್ಲೆಯಾದ್ಯಂತ ಸೋಮವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಹಳ್ಳಿ, ಪಟ್ಟಣ, ನಗರಗಳ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಮಂಗಳಾರತಿಗಳು ನಡೆದವು.
ತಾಲ್ಲೂಕಿನ ಆವಲಗುರ್ಕಿಯ ಈಶಾ (Isha Foundation) ಯೋಗ ಕೇಂದ್ರದಲ್ಲಿ ಸಂಕ್ರಾಂತಿ ಅಂಗವಾಗಿ ಯೋಗ ಕೇಂದ್ರದಲ್ಲಿ ‘ಸಂಕ್ರಾಂತಿ ಜಾತ್ರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬ’ ಅದ್ಧೂರಿಯಾಗಿ ನೆರವೇರಿತು. ಸೋಮವಾರ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರ ನೇತೃತ್ವದಲ್ಲಿ 21 ಅಡಿಗಳ ನಂದಿ ಮೂರ್ತಿ ಮತ್ತು 54 ಅಡಿಯ ಮಹಾಶೂಲ (ತ್ರಿಶೂಲ) ಪ್ರತಿಷ್ಠಾಪಿಸಲಾಯಿತು.
ಚಿಂತಾಮಣಿ :

ಸಂಕ್ರಾಂತಿ ಸಂದರ್ಭದಲ್ಲಿ ಕೈವಾರ ಯೋಗಿನಾರೇಯಣ ಯತೀಂದ್ರರಿಗೆ ಮಾಲೆಯನ್ನು ಹಾಕುವ ಸಂಪ್ರದಾಯವಿದ್ದು ಮಾಲಾಧಾರಿಗಳು ಮಠದ ಆವರಣದಲ್ಲಿ ಭಜನೆ ಮಾಡಿ ಗೋಶಾಲೆಯಲ್ಲಿ ಸಂಕ್ರಾಂತಿ ಪ್ರಯುಕ್ತ ಗೋಪೂಜೆ ನೆರೆವೇರಿಸಿದರು.
ಶಿಡ್ಲಘಟ್ಟ :

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಸೋಮವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀರಾಮ ಭಜನಾ ಮಂಡಳಿ ಭಕ್ತ ವೃಂದದಿಂದ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ರಥೋತ್ಸವ ಆಚರಿಸಿದರು.
ಗೌರಿಬಿದನೂರು :

ಮಕರ ಸಂಕ್ರಾಂತಿ ಪ್ರಯುಕ್ತ ಗೌರಿಬಿದನೂರು ನಗರದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮೆರವಣಿಗೆ ನಡೆಸಿದರು.