Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಗೌರಮ್ಮ ಮಲ್ಲಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಪುವ್ವಾಡ ಫೌಂಡೇಶನ್ ವತಿಯಿಂದ ಶನಿವಾರ ಮತ್ತು ಭಾನುವಾರ ಉಚಿತವಾಗಿ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಡಾ. ಪುವಾಡ ಸಂದೀಪ್ ಮಾತನಾಡಿ, “ನಿನ್ನೆಯಿಂದ ಸುಮಾರು 400 ಜನ ಈ ಶಿಬಿರದಲ್ಲಿ ಪರೀಕ್ಷಿಸಿಕೊಂಡರು. ಅದರಲ್ಲಿ 100 ಜನಕ್ಕೆ ಸಕ್ಕರೆ ಕಾಯಿಲೆ ದೃಢಪಟ್ಟಿದೆ. ಅವರಿಗೆ ಸೂಕ್ತ ವ್ಯಾಯಾಮ, ಆಹಾರ ಕ್ರಮಗಳನ್ನು ಸೂಚಿಸಿ, ಔಷಧಿಯನ್ನು ನೀಡಿದ್ದೇವೆ. 8 ಜನಕ್ಕೆ ಹೃದಯ ಸಂಬಂಧ ಕಾಯಿಲೆ ಕಂಡು ಬಂದಿದೆ. ಅವರಿಗೆ ಸೂಕ್ತ ಸಲಹೆಗಳನ್ನು ಕೊಟ್ಟಿದ್ದೇವೆ ಮತ್ತು ಮುಂದಿನ ಹಂತದ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಇಬ್ಬರಿಗೆ ಕ್ಯಾನ್ಸರ್ ಪತ್ತೆಯಾಗಿದೆ. ಅವರಿಗೂ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು. ನಮ್ಮ ಶಿಬಿರದ ಉದ್ದೇಶ, ಗ್ರಾಮೀಣ ಜನರಲ್ಲಿ ರೋಗವನ್ನು ಬೇಗ ಪತ್ತೆ ಮಾಡಿ ಸಮರ್ಪಕ ಚಿಕಿತ್ಸೆ ಕೊಡುವುದಾಗಿದೆ” ಎಂದು ಹೇಳಿದರು.
ಪುವ್ವಾಡ ಫೌಂಡೇಶನ್ ನ ಎಂ.ಜಿ.ಕಲಾವತಿ, ವೈದ್ಯರಾದ ಡಾ. ಪುವಾಡ ಸಂದೀಪ್, ಡಾ.ಎಂ.ಕೆ.ಪ್ರಿಯಾಂಕ, ಡಾ.ಬೋರೋ ಮಿಯೊ, ಡಾ.ಆದಿಲ್ ಅಪ್ಜಲ್, ಡಾ.ನಿಪ್ಪುನ್ ಕನ್ವರ್, ಸ್ವಯಂಸೇವಕರು ಹಾಜರಿದ್ದರು.