Congress ಪ್ರಜಾಧ್ವನಿ–2 ಕಾರ್ಯಕ್ರಮ

- Advertisement -
- Advertisement -

Malur : ಮಾಲೂರು ಹಾಗೂ ಹೊಸಕೋಟೆ ನಡುವಿನ ಚೊಕ್ಕಂಡಹಳ್ಳಿ ಗೇಟ್‌ ಬಳಿ ಬುಧವಾರ ಕಾಂಗ್ರೆಸ್ ಬೃಹತ್‌ ಸಮಾವೇಶ ಹಾಗೂ ‘ಪ್ರಜಾಧ್ವನಿ-2’ (Congress Prajadwani-2) ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ವರಿಷ್ಠ ರಾಹುಲ್‌ ಗಾಂಧಿ” ಪ್ರಧಾನಿ ಮೋದಿ ದೇಶದ 22 ಶ್ರೀಮಂತ ಉದ್ಯಮಿಗಳ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ನಮ್ಮ ಸಾಲವನ್ನೂ ಮನ್ನಾ ಮಾಡಿ ಎಂದು ರೈತರು ಮನವಿ ಮಾಡಿದಾಗ ಮೋದಿ ಬಾಯಿಯಿಂದ ಒಂದೂ ಪದವೂ ಬರಲಿಲ್ಲ.ಅದಾನಿಗೆ ಹಣ, ಭೂಮಿ ಬೇಕಾದರೆ ಪ್ರಧಾನಿ ಮೋದಿ ಅವರು ಈ ದೇಶದ ಬಡ ಜನರಿಂದ ಕಿತ್ತು ಅವರಿಗೆ ಕೊಡುತ್ತಾರೆ‌‌. ಮುಂಬೈ ವಿಮಾನ ನಿಲ್ದಾಣ ಬೇಕಾದರೆ ಇ.ಡಿ, ಐ.ಟಿ ಬಿಟ್ಟಾದರೂ ಆ ವಿಮಾನ ನಿಲ್ದಾಣ ಕೊಡಿಸುತ್ತಾರೆ. ದೇಶದ ಉದ್ಯೋಗ ವ್ಯವಸ್ಥೆಯನ್ನು ಮೋದಿ ಹಾಳು ಮಾಡಿದ್ದಾರೆ. ಅದಾನಿ ಮಗ ಎಲ್ಲಿ ಬೇಕಾದರೂ ಉದ್ಯೋಗ ಪಡೆದುಕೊಳ್ಳುವ ಅವಕಾಶವಿದೆ. ಆದರೆ, ನಮ್ಮ ಬಡವರಿಗೆ ಅವಕಾಶ ಇಲ್ಲದಾಗಿದೆ. ಹೀಗಾಗಿ ಉದ್ಯೋಗ ಖಚಿತ ಎಂಬ ಕ್ರಾಂತಿಕಾರಿ ಹೆಜ್ಜೆ ಇಡಲಿದ್ದೇವೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್‌.ಮುನಿಯಪ್ಪ, ಬೈರತಿ ಸುರೇಶ್‌, ಡಾ.ಎಂ.ಸಿ.ಸುಧಾಕರ್‌, ಕೃಷ್ಣಬೈರೇಗೌಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ರಾಜ್ಯಸಭೆ ಸದಸ್ಯ ನಾಸೀರ್‌ ಹುಸೇನ್‌, ಮಾಜಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಶಾಸಕರು, ಎಎಪಿ ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!