Malur : ಮಾಲೂರು ತಾಲೂಕ್ಕಿನ ಕುಡಿಯನೂರು (Kudiyanur) ಗ್ರಾಮದಲ್ಲಿ ಧರ್ಮರಾಯ ಹಾಗೂ ದ್ರೌಪತಾಂಬಾ ಅವರ 25ನೇ ಕರಗ (karaga) ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಲಾಯಿತು.
ಭಾನುವಾರ ರಾತ್ರಿ ದೇವಾಲಯದಿಂದ ಹೊರ ಬಂದು ಕರಗವು ಮಂಗಳವಾದ್ಯಗಳ ತಾಳಕ್ಕೆ ತಕ್ಕಂತೆ ಕುಣೆಯುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವೀರಕುಮಾರರು ಕರಗದ ಜೊತೆಯಲ್ಲಿ ಗೋವಿಂದ ನಾಮ ಸ್ಮರಣೆ ಮಾಡುತ್ತಾ ಅಲ್ಲಲ್ಲಿ ತಮ್ಮ ಕತ್ತಿಗಳಿಂದ ಎದೆಗೆ ಬಡಿದು ಕೋಳ್ಳುತ್ತಿದ್ದರು.
ಉತ್ಸವದಲ್ಲಿ ಪ್ರಣವಾನಂದಪುರಿ ಸ್ವಾಮೀಜಿ, ಭರತ ಪೂಜಾರಿ, ಲಕ್ಕೂರು ಕೃಷ್ಣಪ್ಪ, ಗ್ರಾಮದ ಮುಖಂಡರಾದ ಕೆ.ಕೃಷ್ಣಪ್ಪ, ನಾರಾಯಣ ಸ್ವಾಮಿ, ವೆಂಕಟಸ್ವಾಮಿ, ವಿವಾಸ್ ಮುನಿರಾಮಯ್ಯ, ಕೆ.ಸಿ.ಕೃಷ್ಣಪ್ಪ, ಮೋಹನ್, ಮುನಿ ವೆಂಕಟಪ್ಪ ಮತ್ತಿತರರು ಉಪಸ್ಥಿತರಿದ್ದರು.