Manchenahalli : ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ರಸ್ತೆ ದಾಟಲು ಮುಂದಾದ ಸಂದರ್ಭ ಟ್ರಾನ್ಸ್‌ಫಾರ್ಮರ್ (Transformer) ಗ್ರೌಂಡಿಂಗ್ ವೈರ್‌ನಿಂದ ವಿದ್ಯುತ್ ತಗುಲಿ (Electric Shock) ನಾಗೇಂದ್ರ (8) ಎಂಬ ಬಾಲಕ (Boy Death) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಸ್ತೆ ವಿಸ್ತರಣೆಗಾಗಿ ವಿದ್ಯುತ್ ಪರಿವರ್ತಕದ ಬಳಿ ಮಣ್ಣು ತೆಗೆದ ಪರಿಣಾಮ ಹೊಂಡದಲ್ಲಿ ನೀರು ಶೇಖರಣೆಯಾಗಿದೆ. ರಸ್ತೆ ದಾಟಲು ಟ್ರಾನ್ಸ್‌ಫಾರ್ಮರ್ ಬದಿಯಲ್ಲಿ ಹೋಗುವಾಗ ಅವ ಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿನೀಡಿ ಪರಿಶೀಲಿಸಿದರು.