Manchenahalli : ಮಂಚೇನಹಳ್ಳಿ ಪಟ್ಟಣದದಲ್ಲಿ 32 ನೇ ವರ್ಷದ ಪ್ಲೇಗಂಭ ದೇವಿಯ ಹೂವಿನ ಕರಗ (Plegueambha Karaga) ಮಹೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರೆವೇರಿತು. ಬುಧವಾರ ರಾತ್ರಿ 11.15 ಕ್ಕೆ ಆಂಧ್ರದ ಕುಪ್ಪಂನ ಗೋವಿಂದ್ ಅವರು ಹೂವಿನ ಕರಗವನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದರು. ಈ ವೇಳೆ ಭಕ್ತರು ಪ್ಲೇಗಂಭ ದೇವಿಯ ಹೂವಿನ ಕರಗದ ದರ್ಶನ ಪಡೆದರು.
ಈ ಸಂಧರ್ಭದಲ್ಲಿ ಮಾತನಾಡಿದ ಕರಗ ಸಮಿತಿಯ ಕಾರ್ಯದರ್ಶಿ ಈಶ್ವರ್ “ಕಳೆದ 32 ವರ್ಷಗಳಿಂದ ಪ್ಲೇಗಂಭ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಸಹ ವಿಜೃಂಭಣೆಯಾಗಿ ನಡೆಸಲಾಗಿದೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ” ಎಂದು ತಿಳಿಸಿದರು.
ಕರಗ ಸಮಿತಿಯ ಸದಸ್ಯರಾದ ಮಾರುತಿ, ರಘು, ಗಿರೀಶ್, ಕಾರ್ತಿಕ್, ಹರೀಶ್, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.