19.3 C
Bengaluru
Saturday, December 14, 2024

ದ್ವಿತೀಯ ವರ್ಷದ ನವ ಚಂಡಿಕಾ ಯಾಗ

- Advertisement -
- Advertisement -

Melur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಗಂಗಾದೇವಿ ಅಮ್ಮನವರ ದೇವಸ್ಥಾನದ (Sri Gangamma Devi Temple) ಸನ್ನಿಧಿಯಲ್ಲಿ ದ್ವಿತೀಯ ವರ್ಷದ ನವ ಚಂಡಿಕಾ ಯಾಗವನ್ನು (Nava Chandika Yaga) ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಗುರುವಾರ ಮಧ್ಯರಾತ್ರಿಯಿಂದ ಕಾಸರಗೋಡಿನ ಶ್ರೀ ಸೋಮನಾಥ ಅರ್ಚಕರಿಂದ ಅಷ್ಟ ದ್ರವ್ಯ ಗಣಪತಿ ಹೋಮ, ಶ್ರೀ ಗಂಗಾದೇವಿಗೆ ನವಚಂಡಿಯಾಗ, ಶ್ರೀ ಉಮಾ ಮಹೇಶ್ವರ ಸ್ವಾಮಿಗೆ ಶ್ರೀ ರುದ್ರ ಪಾರಾಯಣ, ಹಾಗು ಶ್ರೀ ಸೌಮ್ಯ ಚನ್ನಕೇಶವ ಸ್ವಾಮಿಗೆ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಲಾಯಿತು.

ಥಣಿಸಂದ್ರ ಮಂಜುನಾಥ್, ನಿವೃತ್ತ ಶಿಕ್ಷಕ ರಾಮದಾಸ್ ಹಾಗು ಮಕ್ಕಳು, ಮೇಲೂರು ಗ್ರಾಮ ಪಂಚಾಯಿತಿ ಹಾಗು ಶ್ರೀ ಗಂಗಾದೇವಿ ಧರ್ಮದರ್ಶಿ ಟ್ರಸ್ಟ್ ವತಿಯಿಂದ ನವ ಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿತ್ತು. ಯಾಗದ ನಂತರ ಭಕ್ತಾಧಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಮೇಲೂರು ಸುತ್ತಮುತ್ತಲಿನ ಗ್ರಾಮಗಳಾದ ಮಳ್ಳೂರು, ಭಕ್ತರಹಳ್ಳಿ, ಹಂಡಿಗನಾಳ, ಕೊಂಡೇನಹಳ್ಳಿ, ಮಳಮಾಚನಹಳ್ಳಿ ಸೇರಿದಂತೆ ತಾಲೂಕಿನ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಾಗದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಬದಲ್ಲಿ ತಹಸೀಲ್ದಾರ್ ಬಿ.ಎಸ್.ರಾಜೀವ್, ಗ್ರಾ.ಪಂ ಅಧ್ಯಕ್ಷ ಆರ್.ಎ.ಉಮೇಶ್, ಪಿಡಿಓ ಶಾರದ, ಟ್ರಸ್ಟ್ ನ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಹಾಗು ಗ್ರಾಮದ ಮುಖಂಡರು ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
Latest news
- Advertisement -
Related news
- Advertisement -
error: Content is protected !!