26.5 C
Bengaluru
Thursday, November 21, 2024

ಹಾಲಿನ ದರ ಹೆಚ್ಚಿಸಲು ಹಾಲು ಉತ್ಪಾದಕರ ಒತ್ತಾಯ

- Advertisement -
- Advertisement -

Gauribidanur : ಗೌರಿಬಿದನೂರು ನಗರದ ಹೊರವಲಯದ ಹಾಲು ಶೀತಲೀಕರಣ ಘಟಕದ ಬಳಿ ಇರುವ KOCHIMUL ಉಪ ವ್ಯವಸ್ಥಾಪಕರ ಕಚೇರಿ ಎದುರು ಹಾಲಿನ ದರ ಹೆಚ್ಚಿಸಬೇಕು (Milk Price Hike) ಎಂದು ಒತ್ತಾಯಿಸಿ ಹಾಲು ಉತ್ಪಾದಕರು (Milk Producers) ಹಾಗೂ ವಿವಿಧ ಸಂಘಟನೆಗಳು ಸೋಮವಾರ ಪ್ರತಿಭಟನೆ (Protest) ನಡೆಸಿದವು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮೀನಾರಾಯಣ ಮಾತನಾಡಿ, ಆಗಸ್ಟ್ ತಿಂಗಳಿನಿಂದ ಗ್ರಾಹಕರಿಗೆ ಹಾಲಿನ ದರದಲ್ಲಿ ಮೂರು ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಕೋಚಿಮುಲ್ ಆಡಳಿತವು ಅನಿರೀಕ್ಷಿತವಾಗಿ ರೈತರಿಗೆ ನೀಡುವ ಬೆಲೆಯನ್ನು ಮೂರು ರೂಪಾಯಿಗಳಷ್ಟು ಕಡಿಮೆ (Price Drop)ಮಾಡಿದೆ. ಈ ನಿರ್ಧಾರವು ನ್ಯಾಯಸಮ್ಮತತೆ ಮತ್ತು ಡೈರಿ ರೈತರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಕೋಚಿಮುಲ್ ಪಾತ್ರದ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಈ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ ಆಗಸ್ಟ್ ಮೊದಲ ವಾರದಲ್ಲಿ ಹಾಲು ಉತ್ಪಾದಕರು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಮನವಿ ಪತ್ರವನ್ನು ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ನರೇಂದ್ರ ಅವರಿಗೆ ನೀಡಿದ್ದು, ಆಡಳಿತ ಮಂಡಳಿ ತಮ್ಮ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.

ಜಿ.ವಿ.ಲೋಕೇಶ್ ಗೌಡ, ನರಸರೆಡ್ಡಿ, ಅನಂತರಾಜು, ಸನತ್ ಕುಮಾರ್, ಪ್ರಭಾಕರ್, ಅಶ್ವತ್ಥನಾರಾಯಣ, ಶಶಿಕುಮಾರ್, ವೆಂಕಟರೆಡ್ಡಿ, ಆನಂದರೆಡ್ಡಿ, ರಾಜಣ್ಣ, ಹನುಮಂತಪ್ಪ, ಮುದ್ದರಂಗಪ್ಪ, ಗೋಪಿ, ಮಾಳಪ್ಪ, ನಂದಾ, ಲಕ್ಷ್ಮಿ, ರತ್ನರಾಜು, ಅರುಣ್, ಶಿವಕುಮಾರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!