Home Sidlaghatta ದುಷ್ಕರ್ಮಿಗಳಿಂದ ಬೆಳೆ ನಾಶ

ದುಷ್ಕರ್ಮಿಗಳಿಂದ ಬೆಳೆ ನಾಶ

0
327

Chowdasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದ ಸಿ.ಎನ್.ಲಕ್ಷ್ಮೀಪತಿ ಅವರ ತೋಟದಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಈಗ ತಾನೇ ಪಸಲಿಗೆ ಪ್ರಾರಂಭವಾಗಿದ್ದ ಹಾಗಲಕಾಯಿ ಗಿಡಗಳನ್ನ ಕತ್ತರಿಸಿ ಹಾಗಲಕಾಯಿಗಳನ್ನ ತುಂಡರಿಸಿ ಬಿಸಾಡಿದ್ದಾರೆ.

ನೀರಿನ ಅಭಾವದಿಂದ ದ್ರಾಕ್ಷಿ ಬೆಳೆ ನಷ್ಟವಾದ ಕಾರಣ ದ್ರಾಕ್ಷಿ ತೆಗೆದು ಎರಡೂವರೆ ಎಕರೆ ಜಮೀನಿನಲ್ಲಿ ಹಾಗಲ ಕಾಯಿ ಕೃಷಿಗೆ ಲಕ್ಷ್ಮೀಪತಿಯವರು ಕೈ ಹಾಕಿದ್ದರು. ಸುಮಾರು ಎರಡೂವರೆ ಲಕ್ಷ ರೂಗಳಷ್ಟು ಖರ್ಚುಮಾಡಿ ಎರಡು ತಿಂಗಳ ಹಿಂದೆ ನಾಟಿ ಮಾಡಿದ್ದರು. ಇದೀಗ ಉತ್ತಮ ಫಸಲು ಬಿಟ್ಟಿತ್ತು, ಬೆಲೆಯೂ ಉತ್ತಮವಾಗಿರುವುದರಿಂದ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದರು. ಇದೀಗ ದುಷರ್ಮಿಗಳ ಈ ಕೃತ್ಯದಿಂದ ಅವರು ನೊಂದಿದ್ದಾರೆ. ಯಾರಿಗೂ ತೊಂದರೆ ಮಾಡದ, ಕೇಡು ಬಯಸದಿದ್ದರೂ, ಬೆಳೆಯನ್ನು ನಾಶ ಮಾಡಿರುವ ಮನಸ್ಥಿತಿಗಳ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!