Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಆಸ್ಪತ್ರೆಗೆ (District Hospital) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಬುಧವಾರ ದಿಢೀರ್ ಭೇಟಿ (Visit) ನೀಡಿ ರೋಗಿಗಳು ಮತ್ತು ಅವರ ಸಂಬಂಧಿಕರ ಬಳಿ ನಿಮ್ಮಿಂದ ಯಾವ ಸಿಬ್ಬಂದಿಯಾದರೂ ಹಣ ಪಡೆದಿದ್ದಾರಾ? ರೋಗಿಯ ಜೊತೆ ಎಷ್ಟು ಜನ ಇದ್ದೀರಿ. ವ್ಯವಸ್ಥೆಗಳು ಹೇಗಿವೆ, ಚಿಕಿತ್ಸೆ ದೊರೆಯುತ್ತಿದೆಯೇ? ಯಾವ ಗ್ರಾಮ…ಹೀಗೆ ಸಂವಾದ ನಡೆಸಿ ಮಾಹಿತಿ ಪಡೆದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತಾನಾಡಿದ ಶಾಸಕರು ” ವೈದ್ಯರು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ರೋಗಿಗಳಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿಯೇ ಈ ಸಭೆ ನಡೆಸಲಾಗಿದ್ದು ನಾನು ಮಾತನಾಡಿಸಿದ ಯಾವ ರೋಗಿಯೂ ವೈದ್ಯರು ನಮ್ಮಿಂದ ಹಣ ಪಡೆದಿದ್ದಾರೆ ಎಂದು ಹೇಳಿಲ್ಲ. ರೋಗಿಗಳು ಮತ್ತು ಅವರ ಸಂಬಂಧಿಕರ ಜೊತೆ ಮಾನವೀಯವಾಗಿ ವರ್ತಿಸಿ ಎಂದು ವೈದ್ಯರಿಗೂ ಸೂಚಿಸಿದ್ದೇನೆ. ಮುಂದಿನ 15 ದಿನಗಳಲ್ಲಿ ಆಸ್ಪತ್ರೆಯಲ್ಲಿ ವ್ಯವಸ್ಥೆಗಳನ್ನು ಸಮಗ್ರವಾಗಿ ಬದಲಾವಣೆ ಮಾಡಲಾಗುವುದು ಈಗ ಭದ್ರತೆ, ಸೌಲಭ್ಯ, ‘ಡಿ’ ಗ್ರೂಪ್ ಸಿಬ್ಬಂದಿ ಬದಲಾವಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಯಾರೇ ಆದರೂ ವೈದ್ಯರ ಮೇಲೆ ಹಲ್ಲೆ ನಡೆಸುವುದು ಅಥವಾ ಅವಾಚ್ಯವಾಗಿ ನಿಂದಿಸಿದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ” ಎಂದು ತಿಳಿಸಿದರು.
ನಂದಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾದೇವಿ ಮತ್ತಿತರರು ಉಪಸ್ಥಿತರಿದ್ದರು.