Kolar : ಮುಡಾ, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ (MUDA Scam) ಆರೋಪಿಸಿ ಕೋಲಾರ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ವಿಧಾನ ಪರಿಷತ್ ಮಾಜಿ ಸಚೇತಕ ಬಿಜೆಪಿ ಮುಖಂಡ ವೈ.ಎ.ನಾರಾಯಣಸ್ವಾಮಿ (Dr Y A Narayanaswamy) ಸುದ್ದಿಗೋಷ್ಠಿ (Press Meet) ನಡೆಸಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳಾಗಿದ್ದು, ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ವಾಲ್ಮೀಕಿ ನಿಗಮದ ₹ 187 ಕೋಟಿ ದುರುಪಯೋಗವಾಗಿದ್ದು, ಈಗ ಬಿಡಿಎ ಮೀರಿಸುವ ಹಗರಣ ಮುಡಾದಲ್ಲಿ ನಡೆದಿದೆ. ಸಿದ್ದರಾಮಯ್ಯ ಮುಡಾ ಆಡಳಿತ ಮಂಡಳಿಯ ಸದಸ್ಯರಾಗಿದ್ದು ಅವರಿಗೆ ಗೊತ್ತಿಲ್ಲದೇ ಇಷ್ಟೆಲ್ಲಾ ಹಗರಣ ನಡೆದಿದೆಯೇ? ಈ ಹಗರಣದಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ವೈ.ಎ.ನಾರಾಯಣಸ್ವಾಮಿ ಆಪಾದಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಮಾಧ್ಯಮ ಪ್ರಮುಖ್ ಪ್ರವೀಣ್ ಗೌಡ, ಸಹ ಪ್ರಮುಖ್ ಕೆಂಬೋಡಿ, ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಮಾಲೂರು ವೇಮಣ್ಣ, ಶಿಳ್ಳಂಗೆರೆ ಮಹೇಶ್, ರಾಜೇಶ್ ಸಿಂಗ್, ಓಹಿಲೇಶ್ ಉಪಸ್ಥಿತರಿದ್ದರು.