25.3 C
Bengaluru
Thursday, February 26, 2026

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಚಂಡಿಕಾಯಾಗ

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ (Muddenahalli) ಸತ್ಯಸಾಯಿ ಗ್ರಾಮ (Satya Sai Grama) ದಲ್ಲಿ ನಾಡಹಬ್ಬ ದಸರಾ (Dussehra) ಪ್ರಯುಕ್ತ ಚಂಡಿಕಾಯಾಗ, ನವರಾತ್ರಿ ಹೋಮ ಕಾರ್ಯಕ್ರಮದ ಸಾಂಸ್ಕೃತಿಕ ಸಂಧ್ಯಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾನಾಡಿದ ಸಂಸದ ತೇಜಸ್ವಿ ಸೂರ್ಯ (Tejasvi Surya) ” ಬದುಕಿನಲ್ಲಿ ಸಾಂದರ್ಭಿಕವಾಗಿ ಬರುವ ಅಡೆತಡೆಗಳು ಎಲ್ಲ ದಾರಿಗಳನ್ನು ಮುಚ್ಚುತ್ತವೆ, ಆದರೆ ಭಗವಂತನ ದಾರಿ ಒಂದು ಮಾತ್ರ ತೆರೆದಿರುತ್ತದೆ” ಎಂದು ಹೇಳಿದರು.

ಸತ್ಯಸಾಯಿ ಹೃದಯ ಮಂದಿರದ ಆವರಣದ ಯಾಗ ಮಂಟಪದಲ್ಲಿ ಶಿವ ಪಂಚಾಕ್ಷರಿ ಹೋಮ ಮತ್ತು ಸಪ್ತದ್ರವ್ಯ ಮಹಾ ಮೃತ್ಯುಂಜಯ ಯಾಗ ನೆರವೇರಿಸಿ ಕೂಷ್ಮಾಂಡ ದೇವಿಯನ್ನು ಆರಾಧನೆ ಮತ್ತು ಮೃತ್ಯುಂಜಯ ಹೋಮ ನೆರವೇರಿಸಲಾಯಿತು. ಕಲಾಧರ ಯಕ್ಷರಂಗ ಬಳಗವು ಸಾಂಸ್ಕೃತಿಕ ಸಂಧ್ಯಾ ಕಾರ್ಯಕ್ರಮದ ಭಾಗವಾಗಿ ‘ಕಂಸ ವಧೆ’ ಎಂಬ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ (T. B. Jayachandra), ಮಧುಸೂದನ ಸಾಯಿ, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್. ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!