Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ (Muddenahalli) ಸತ್ಯಸಾಯಿ ಗ್ರಾಮದಲ್ಲಿ ಸತ್ಯಸಾಯಿ ಲೋಕಸೇವಾ ಗುರುಕುಲಂ ವಿದ್ಯಾಸಂಸ್ಥೆಗಳ (Sathyasai Lokaseva Gurukulam) ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಭಾನುವಾರ ಹಮ್ಮಿಕೊಳ್ಳಲಾಯಿತು. ಉತ್ಸವದಲ್ಲಿ 28 ಸಂಸ್ಥೆಗಳ 3,600 ವಿದ್ಯಾರ್ಥಿಗಳು ಭಾಗವಹಿಸಿದರು (annual sports) .
ಉತ್ಸವದಲ್ಲಿ ವಿವಿಧ ನೃತ್ಯ ಮತ್ತು ಪ್ರದರ್ಶನಗಳು ಇದ್ದವು. ತಮಿಳುನಾಡಿನ ಪಲ್ಲಕ್ಕಿ ಮೆರವಣಿಗೆ, ಗುಜರಾತಿ ಮತ್ತು ತೆಲಂಗಾಣದ ಕೂಚುಪುಡಿ ಭರತನಾಟ್ಯಗಳು, ಹಾಗೂ ಕೇರಳದ ಕಳರಿ ಕೌಶಲ್ಯ ನೃತ್ಯ ಪ್ರದರ್ಶನಗೊಂಡವು.
ಹೆಚ್ಚು ಆಕರ್ಷಣೆಯಾದವು, ಮೋಟರ್ ಸೈಕಲ್ ಮೇಲೆ pyramid ರಚನೆ, ಅಡೆತಡೆ ನಿವಾರಣೆ, ಹಾಗೂ ಸವಾರಿ ಮಾಡುವುದರ ಜೊತೆಗೆ ಸಾಂಸ್ಕೃತಿಕ ನೃತ್ಯಗಳು.
ಸದ್ಗುರು ಮಧುಸೂದನ ಸಾಯಿ ಅವರು ಬಹು ವರ್ಣಗಳ ಬೇಲೂನುಗಳ ಗುಚ್ಛವನ್ನು ಗಾಳಿಯಲ್ಲಿ ತೇಲಿಬಿಟ್ಟು ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಖ್ಯಾತ ಕ್ರಿಕೆಟಿಗ ಜಿ.ಆರ್ ವಿಶ್ವನಾಥ್, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್ ನರಸಿಂಹಮೂರ್ತಿ, ಸತ್ಯಸಾಯಿ ಸಂಜೀವಿನಿ ಆಸ್ಪತ್ರೆಗಳ ಮುಖ್ಯಸ್ಥ ಡಾ.ಸಿ ಶ್ರೀನಿವಾಸ್ ಪಾಲ್ಗೊಂಡಿದ್ದರು.