Mulabagilu : ಕೋಲಾರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮುಳಬಾಗಿಲು ನಗರದ ಹೊರವಲಯದ ಬಾಲಾಜಿ ಭವನ ಪಕ್ಕದಲ್ಲಿ ಹಾಳಿಪಟ ಹಾಗೂ ಬಲೂನು ಹಾರಿಸುವ ಮೂಲಕ ಮತದಾನ ಜಾಗೃತಿ (Voting Awareness) ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಹಾಗೂ ಸಿಇಒ ಪದ್ಮಾ ಬಸವಂತಪ್ಪ “ಜಿಲ್ಲೆಯಾದ್ಯಂತ ಶೇ 100ರಷ್ಟು ಮತದಾನವಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮುಳಬಾಗಿಲು ತಾಲ್ಲೂಕಿನ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನವಾಗಿಸಲು ಈಗಾಗಲೇ ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುಲಾಗುತ್ತಿದೆ. ಗಾಳಿಯಲ್ಲಿ ಕೇಸರಿ, ಬಿಳಿ ಹಸಿರು ಬಣ್ಣದ ಬಲೂನು ಹಾಗೂ ಮತದಾನ ಮಾಡುವ ಕುರಿತು ಸಂದೇಶ ಒಳಗೊಂಡಿರುವ ಬಲೂನು ಹಾರಿಸುವ ಮೂಲಕ ಎಲ್ಲರೂ ನಿರ್ಭಿತಿಯಿಂದ ಮತದಾನ ಮಾಡಿ” ಎಂದು ತಿಳಿಸಿದರು.
ಚುನಾವಣಾಧಿಕಾರಿ ಭಾಗ್ಯಮ್ಮ, ತಹಶೀಲ್ದಾರ್ ರಾಜಶೇಖರ ಮೂರ್ತಿ, ಗ್ರೇಡ್ 2 ತಹಶೀಲ್ದಾರ್ ಬಿ. ಆರ್.ಮುನಿವೆಂಕಟಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ರಮೇಶ್ ರೆಡ್ಡಿ, ನಗರಸಭೆ ಪೌರಾಯುಕ್ತ ವಿ. ಶ್ರೀಧರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರವಿಚಂದ್ರ, ನೋಡಲ್ ಅಧಿಕಾರಿ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.