Mulbagal : ಮುಳಬಾಗಿಲು ತಾಲ್ಲೂಕಿನ ಬೈರಕೂರು ಸಮೀಪದ ಇರಗಮುತ್ತನಹಳ್ಳಿ (Iragamuttanahalli) ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಮನೆಯಲ್ಲಿದ್ದ ನಗದು ಹಾಗೂ ಆಭರಣಗಳನ್ನು ಕದ್ದು ಪರಾರಿಯಾಗಿರುವ (Home Theft) ಘಟನೆ ಬೆಳಕಿಗೆ ಬಂದಿದೆ.
ಇರಗಮುತ್ತನಹಳ್ಳಿ ಗ್ರಾಮದ ಆಲೇರಮ್ಮ ಅವರ ಮಗನಿಗೆ ಇತ್ತೀಚೆಗೆ ಮದುವೆಯಾಗಿದ್ದು ಸೊಸೆಯ ಆಭರಣಗಳನ್ನು ಹಾಗೂ ₹ 50 ಸಾವಿರ ನಗದನ್ನು ಬೀರುವಿನಲ್ಲಿ ಇಟ್ಟು, ಮನೆಗೆ ಬೀಗ ಹಾಕಿಕೊಂಡು ಮಗಳ ಊರಿಗೆ ಹೊಗಿದ್ದಾಗ ಘಟನೆ ನಡೆದಿದೆ. ರಾತ್ರಿ ಬೀಗ ಮುರಿದು, ಬೀರುವಿನಲ್ಲಿದ್ದ 90 ಗ್ರಾಂ ಚಿನ್ನದ ಆಭರಣ ಹಾಗೂ ₹ 50 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಡಿವೈಎಸ್ಪಿ ಡಿ. ಸಿ.ನಂದಕುಮಾರ್, ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್, ಸಬ್ ಇನ್ ಸ್ಪೆಕ್ಟರ್ ಅರ್ಜುನ್ ಎಸ್.ಆರ್.ಗೌಡ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.