Chikkaballapur : ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (Muncipal College) ಶನಿವಾರ ಕಾಲೇಜು ವಾರ್ಷಿಕೋತ್ಸವ (Anniversary) ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ “ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ದೊರೆಯಲು ಗುಣಮಟ್ಟದ ಶಿಕ್ಷಣ ಅಗತ್ಯ. ಎರಡು ಸಾವಿರನೇ ಇಸವಿ ನಂತರ ಶಿಕ್ಷಕ, ಶಿಕ್ಷಣ, ಪರೀಕ್ಷೆಗಳ ಮಾದರಿ ಬದಲಾಗಿದ್ದು ಅಂತರ್ಜಾಲದ ಸಹಾಯದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಕಷ್ಟು ಮಂದಿ ತಯಾರಾಗುತ್ತಿದ್ದಾರೆ. ಬೆರಳ ತುದಿಯಲ್ಲಿಯೇ ಅಗತ್ಯ ಜ್ಞಾನ ದೊರೆಯಲಿದೆ. ನಿಶ್ಚಿತ ಯೋಜನೆಯಿದ್ದರೆ ಯಾರೂ ಕೂಡ ನಿರುದ್ಯೋಗಿಯಾಗಿ ಕುಳಿತುಕೊಳ್ಳುವುದಿಲ್ಲ. ಪದವಿ ಶಿಕ್ಷಣ ಬೇರೆ, ಸ್ಪರ್ಧಾತ್ಮಕ ಪರೀಕ್ಷೆ ಬೇರೆ. ಪರಿಶ್ರಮ ಪ್ರಯತ್ನ ಇದ್ದರೆ ಗುರಿ ಮುಟ್ಟಲು ಸಾಧ್ಯ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಡಿಸಿ ಸದಸ್ಯ ಟಿ.ಎಲ್.ಶ್ರೀನಿವಾಸ್, ಪ್ರಾಂಶುಪಾಲ ಮುನಿರಾಜು, ಪ್ರಾಧ್ಯಾಪಕರಾದ ನಾಗರಾಜು, ರಂಗಪ್ಪ, ಸುನಿತಾ, ಜಗದೀಶ್, ಎಲ್.ನಾಗರಾಜು, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಹರಿ ಮತ್ತಿತರರು ಪಾಲ್ಗೊಂಡಿದ್ದರು.