Home News Chintamani ಮುರುಗಮಲ್ಲ ಗಂಧೋತ್ಸವಕ್ಕೆ ತೆರೆ

ಮುರುಗಮಲ್ಲ ಗಂಧೋತ್ಸವಕ್ಕೆ ತೆರೆ

0
966
Chintamani Murugamalla Urus Conclussion

Chintamani : ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ (Karnataka Wakf Board) ವತಿಯಿಂದ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಅಮ್ಮಾಜಾನ್ ಬಾವಾಜಾನ್ ದರ್ಗಾ (Murugamalla Dargah) ದಲ್ಲಿ ಆಯೋಜಿಸಿದ ಗಂಧೋತ್ಸವ ಸೋಮವಾರ ಅದ್ದೂರಿ ಹಾಗೂ ಶಾಂತಿಯುತವಾಗಿ ಮುಗಿದಿದೆ.

ತಮಟೆ ವಾದನದೊಂದಿಗೆ ಗ್ರಾಮದ ವಕ್ಫ್ ಕಚೇರಿಯಿಂದ ಮುಜಾವರ್ ಕುರ್ರಂ ಆಲಿ ತಂಡ ಗಂಧವನ್ನು ಹೊತ್ತು ರಾತ್ರಿ 10ಗಂಟೆಗೆ ಮೆರವಣಿಗೆಯಲ್ಲಿ ಪ್ರಾರಂಭಿಸಿದರು. . ದರ್ಗಾ ಆವರಣದಲ್ಲಿ ನಡೆದ ಮುಂಬೈನ ದಾನಿಶ್ ಸಾಬ್ರಿ (Danish Sabri) ಮತ್ತು ಸರ್ಫರಾಜ್ ಸಾಬ್ರಿ (Sarfaraz Sabri) ತಂಡದಿಂದ ನಡೆದ ಕವ್ವಾಲಿ (Qawwali) ಕಾರ್ಯಕ್ರಮ ಎರಡು ದಿನಗಳ ಉರುಸ್‌ನ ಪ್ರಮುಖ ಆಕರ್ಷಣೆಯಾಗಿತ್ತು.

ಶಾಸಕ ಎಂ.ಕೃಷ್ಣಾರೆಡ್ಡಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ-ಸಾ-ದಿ ಮಾಜಿ ಅಧ್ಯಕ್ಷ ರಿಯಾಜ್ ಖಾನ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮುಜಮಿಲ್, ಅಧಿಕಾರಿಗಳಾದ ರಜಿಯಾ ಸುಲ್ತಾನ ಪದಾಧಿಕಾರಿಗಳು, ದರ್ಗಾ ಮೇಲ್ವಿಚಾರಕರು , ನಗರಸಭಾ ಸದಸ್ಯರಾದ ಟೊಮ್ಯಾಟೊ ಗೌಸ್, ಚೌಡರೆಡ್ಡಿಪಾಳ್ಯದ ಅಪ್ಸರ್ ಪಾಷಾ, ಮುರುಗಮಲ್ಲ ಮುಜಮಿಲ್ ಸೇರಿದಂತೆ ಸ್ಥಳೀಯ ಮುಖಂಡರು, ಮಸೀದಿಗಳ ಮುಖ್ಯಸ್ಥರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!