20.3 C
Bengaluru
Thursday, November 21, 2024

ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಲ್ಲೋಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (Nallojanahalli Milk Co Operative Society) ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಕೋಚಿಮುಲ್ (KOCHLIMUL) ನಿರ್ದೇಶಕಿ ಸುನಂದಮ್ಮ ಪೆದ್ದಾರೆಡ್ಡಿ ಮಾತನಾಡಿದರು.

ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದ್ದಾಗಿದೆ. ಹಾಲು ಉತ್ಪಾದಕರು ಡೈರಿಗಳಿಗೆ ಹಾಕುವ ಹಾಲಿನ ಗುಣಮಟ್ಟ ಉತ್ತಮವಾಗಿ ಇದ್ದಲ್ಲಿ, ಉತ್ಪಾದಕರಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಅವರು ತಿಳಿಸಿದರು.

 ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ, ಹೊಸಕೋಟೆ ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆಯಲ್ಲಿ ಶೇ 90 ರಷ್ಟು ಗುಣಮಟ್ಟ ಇದೆ. ನಮ್ಮ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಉತ್ಪಾದಿಸುವ ಹಾಲಿನ ಗುಣ ಮಟ್ಟದಲ್ಲಿ ಸುಧಾರಣೆಯಾಗಬೇಕಿದೆ. ಸಹಕಾರ ಸಂಘಗಳಲ್ಲಿ ಉತ್ತಮ ಗುಣಮಟ್ಟದ ಹಾಲು ಶೇಖರಣೆಯಾದಾಗ ಹಾಲಿಗೆ ತಕ್ಕ ಬೆಲೆ ಸಿಗುವ ಮೂಲಕ ಸಹಕಾರ ಸಂಘವನ್ನು ಮುಂದುವರಿಸಿಕೊಂಡು ಹೋಗಬಹುದು. ಆಗ ಹಾಲಿನ ಉತ್ಪಾದಕನಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದರು.

 ನಲ್ಲೋಜನಹಳ್ಳಿ ಡೈರಿ ಅಧ್ಯಕ್ಷ ಕೆ.ಬಾವರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಮಹೇಶ್, ವ್ಯವಸ್ಥಾಪಕರಾದ ಕೆಂಪರಾಜು, ಶಂಕರರೆಡ್ಡಿ, ವಿಸ್ತರಣಾಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಎಂಪಿಸಿಎಸ್ ಸದಸ್ಯರಾದ ನಾಗರಾಜ್, ಮುನಿಕೃಷ್ಣಪ್ಪ, ಶ್ರೀನಿವಾಸ್, ದ್ಯಾವಪ್ಪ, ಆವುಲಪ್ಪ, ವೇಣು, ಗಂಗುಲಪ್ಪ, ಮುನಿಶಾಮಿರೆಡ್ಡಿ, ದ್ಯಾವಮ್ಮ, ರಾಧಮ್ಮ ಹಾಜರಿದ್ದರು.

 

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -
error: Content is protected !!