Chikkaballapur : ಚಿಕ್ಕಬಳ್ಳಾಪುರ ನಗರದ 8ನೇ ವಾರ್ಡ್‌ನಲ್ಲಿ (Ward 8) ಸೋಮವಾರ ಶಾಸಕ ಪ್ರದೀಪ್ ಈಶ್ವರ್ ‘ನಮಸ್ತೆ ಚಿಕ್ಕಬಳ್ಳಾಪುರ’ (Namaste Chikkaballapur) ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಶವಾಗಾರದ ಹಿಂಭಾಗದ ನಿವಾಸಿಗಳು ‘ಇಲ್ಲಿ ಶವಾಗಾರವಿದ್ದು ವಾಸನೆ ಬರುತ್ತದೆ. ಈ ಬಗ್ಗೆ ಕ್ರಮವಹಿಸಬೇಕು’ ಎಂದು ಕೋರಿದರು. ‘ನಮ್ಮ ಮನೆಗೆ ಶೌಚಾಲಯದ ವ್ಯವಸ್ಥೆ ಇಲ್ಲ’ ಎಂದು 16 ಮನೆಗಳ ಜನರು ಮಾಹಿತಿ ನೀಡಿದರು. ಸ್ನಾನ ಮತ್ತು ಶೌಚಾಕ್ಕೆ ಮತ್ತೊಂದು ಕಡೆ ತೆರಳಬೇಕಾಗಿದೆ. ಈ ಸಮಸ್ಯೆ ಪರಿಹರಿಸಿ ಎಂದು ಕೋರಿದರು.
ಆಗ ಶಾಸಕರು ಇಲ್ಲಿ ಯುಜಿಡಿ ಸೌಲಭ್ಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಯುಜಿಡಿ ಸಂಪರ್ಕಕ್ಕೆ ಯೋಜನೆಯೂ ಸಿದ್ಧವಾಗಿದೆ. ನಗರದಲ್ಲಿ ಎರಡು ತಿಂಗಳಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಲಿದ್ದು ಖಂಡಿತವಾಗಿಯೂ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು. ವಿದ್ಯುತ್ ದೀಪಗಳು ಇಲ್ಲ ಎನ್ನುವುದನ್ನು ಗಮನಕ್ಕೆ ತಂದ ವೇಳೆ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು, ‘ಇಂದೇ ವಿದ್ಯುತ್ ಬಲ್ಪ್‌ಗಳನ್ನು ಅಳವಡಿಸಬೇಕು’ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಹಾಗೂ ನಗರಸಭೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.