Mulabagal : ಮುಳಬಾಗಿಲು ತಾಲ್ಲೂಕಿನ ನಂಗಲಿ (Nangli) ಗ್ರಾಮದ ಧರ್ಮರಾಯ–ದ್ರೌಪದಮ್ಮ (Dharmaraaya Droupadamma Karga) 53ನೇ ವರ್ಷದ ಕರಗ ಮಹೋತ್ಸವ ಶನಿವಾರ ಅದ್ದೂರಿಯಾಗಿ ನಡೆಯಿತು.
ಮಧ್ಯರಾತ್ರಿ ಕರಗಧಾರಿ ಎಸ್. ವಿಜಯ್ ಕುಮಾರ್ ಕರಗವನ್ನು ಹೊತ್ತು ದೇವಾಲಯದಿಂದ ಆಚೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಚಪ್ಪಾಳೆ ಹಾಗೂ ಶಿಳ್ಳೆ ಹಾಕಿ ಸ್ವಾಗತ ಕೋರಿದರು. ದೇವಾಲಯ ಮುಂಭಾಗದ ವೇದಿಕೆಯ ಮೇಲೆ ಸಂಗೀತ ವಾದ್ಯಗಳಿಗೆ ಅನುಗುಣವಾಗಿ ನೃತ್ಯ ಮಾಡಿದರು. ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಿತು.
ಭಾನುವಾರ ಸಂಜೆ ಅಗ್ನಿಕುಂಡ ಪ್ರವೇಶ ಮಾಡುವ ಮೂಲಕ ಕರಗ ಕೊನೆಯಾಯಿತು.