Gauribidanur : ಗೌರಿಬಿದನೂರು ನಗರದ ನ್ಯಾಷನಲ್ ಕಾಲೇಜಿನಲ್ಲಿ (National College) ಶುಕ್ರವಾರ ಕಾಲೇಜಿನ ವಾರ್ಷಿಕೋತ್ಸವ (Anniversary) ಮತ್ತು ವಿವೇಕಾನಂದರ ಜಯಂತಿ (National Youth Day) ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೆಂಕಟಶಿವಾರೆಡ್ಡಿ “1964ರಲ್ಲಿ ಎಚ್. ನರಸಿಂಹಯ್ಯ ಅವರು ಸ್ಥಾಪಿಸಿದ ಈ ನ್ಯಾಷನಲ್ ಕಾಲೇಜು ಗೌರಿಬಿದನೂರು ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿ ಅಮೂಲ್ಯ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಇದೇ ಕಾಲೇಜಿನಲ್ಲಿ ಎಂಜಿನಿಯರಿಂಗ್, ಬಿಬಿಎ, ಎಂಸಿಎ ಕೋರ್ಸ್‌ಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿ.ಮಂಜುನಾಥ್, ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜಪ್ಪ, ವೆಂಕಟಸ್ವಾಮಿ, ಆಡಳಿತ ಮಂಡಳಿ ಸದಸ್ಯ ಎಂ.ವಿ ಕೃಷ್ಣಮೂರ್ತಿ, ಎಚ್.ವಿ ವೆಂಕಟೇಶ್, ವೆಂಕಟರಮಣಪ್ಪ, ಪ್ರಾಂಶುಪಾಲರಾದ ಗಾಯತ್ರಿ, ಟಿ ಜಯರಾಂ, ಉಪ ಪ್ರಾಂಶುಪಾಲ ಟಿ.ನಂಜುಂಡಪ್ಪ, ಉಪನ್ಯಾಸಕ ಮದ್ದಲೆಟಿ, ವಿಜಯಕುಮಾರ್, ಶ್ರೀವಿದ್ಯಾ, ಪ್ರಸನ್ನ, ನರೇಶ, ಕುಮಾರ್, ಸರೋಜ ಪಾಲ್ಗೊಂಡಿದ್ದರು.