Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಇನಮಿಂಚೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಗಸ್ತ್ಯ ಫೌಂಡೇಶನ್ ಸಂಸ್ಥೆ ಸಹಯೋಗದೊಂದಿಗೆ ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು (National Science Day) ಆಚರಿಸಿದರು.
ಸೌರವ್ಯೂಹ, ನ್ಯೂಟನ್‌ನ ಚಲನೆಯ ನಿಯಮಗಳು, ಗ್ರಹಗಳು, ಮಾನವನ ಜೀರ್ಣಾಂಗ ವ್ಯೂಹ, ಹುಲ್ಲುಗಾವಲು, ಸರೋವರ, ಆವಾಸಗಳು, ಜಲಚಕ್ರದ ಮಾದರಿ, ಪವನ ಶಕ್ತಿ ಮಾದರಿ, ವಿದ್ಯುತ್ ಮಂಡಲಗಳು, ಸೂಕ್ಷ್ಮದರ್ಶಕ, ಮಳೆನೀರು ಕೊಯ್ಲು, ಸ್ಪೇಸ್ ಸೆಟಲೈಟ್‌ಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದವು. ಭಾಷಣ, ವಿಜ್ಞಾನದ ಗೀತೆ, ಪ್ರಯೋಗಳು ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಗುಡಿಬಂಡೆ
Gudibande : ಗುಡಿಬಂಡೆ ಪಟ್ಟಣದ ಸಾಯಿ ವಿದ್ಯಾನಿಕೇತನ್ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಮತ್ತು ವಸ್ತು ಪ್ರದರ್ಶನ ನಡೆಯಿತು.
ವಿದ್ಯಾರ್ಥಿಗಳ ಹಸಿರೀಕರಣ, ಭೂಮಿ, ಗಣಿತದ ಸೂತ್ರಗಳು, ಹೊಸ ತಂತ್ರಜ್ಞಾನ., ಗಡಿಯಾರ, ಆಸ್ಪತ್ರೆ, ನಮ್ಮ ರಸ್ತೆಗಳು, ಗುಡಿ ಗೋಪುರಗಳು, ಮೊಬೈಲ್ ತಂತ್ರಜ್ಞಾನ, ತರಕಾರಿ ಬೆಳೆಯುವ ರೀತಿ, ಸಾವಯವ ಗೊಬ್ಬರ, ರೈತನ ದುಡಿಮೆ, ಮಣ್ಣು, ಕುರಿತ ಪ್ರದರ್ಶನ ಗಮನ ಸೆಳೆಯಿತು.