Home Sidlaghatta ಪಲಿಚೇರ್ಲು ಗ್ರಾ.ಪಂ.ಗೆ ಕಾಂಗ್ರೆಸ್‌ ನ ಅಧ್ಯಕ್ಷೆ, ಬಿಜೆಪಿ ಬೆಂಬಲಿತ ಉಪಾಧ್ಯಕ್ಷೆ ಆಯ್ಕೆ

ಪಲಿಚೇರ್ಲು ಗ್ರಾ.ಪಂ.ಗೆ ಕಾಂಗ್ರೆಸ್‌ ನ ಅಧ್ಯಕ್ಷೆ, ಬಿಜೆಪಿ ಬೆಂಬಲಿತ ಉಪಾಧ್ಯಕ್ಷೆ ಆಯ್ಕೆ

0
317

Palicherlu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮೀನಾ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿತ್ತು.

ಅಧ್ಯಕ್ಷರ ಸ್ಥಾನಕ್ಕೆ ಲಕ್ಷ್ಮಿದೇವಮ್ಮ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮೀನಾ ಮಾತ್ರವೇ ನಾಮಪತ್ರ ಸಲ್ಲಿಸಿದ ಕಾರಣ ಅವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಅವರು ಘೋಷಿಸಿದರು. ಈ ವೇಳೆ ಮಾಸ್ಟರ್ ಟ್ರೈನರ್ ಎಚ್.ಸಿ.ಮುನಿರಾಜು, ಪಿಡಿಒ ಗೋಪಿನಾಥ್, ಕಿರಣ್ ಹಾಜರಿದ್ದರು.

ಮಾಜಿ ಶಾಸಕ ಎಂ.ರಾಜಣ್ಣ, ಕಾಂಗ್ರೆಸ್ ಮುಖಂಡರಾದ ರಾಜೀವ್‌ಗೌಡ, ಪುಟ್ಟು ಆಂಜಿನಪ್ಪ, ಡಿ.ವಿ.ವೆಂಕಟೇಶ್, ಥಣಿಸಂದ್ರ ರವಿ ಇನ್ನಿತರೆ ಮುಖಂಡರು ಹಾಜರಾಗಿ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯರನ್ನು ಅಭಿನಂದಿಸಿದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!