Chikkaballapur : ಏಸುಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದ ಸ್ಮರಣೆಗಾಗಿ ಖರ್ಜೂರ ಗರಿಗಳ ಹಬ್ಬವನ್ನು (palm sunday) ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದ ಸಿಎಸ್‌ಐ ಚರ್ಚ್ ಅನುಯಾಯಿಗಳು ಪ್ರಮುಖ ಬೀದಿಗಳಲ್ಲಿ ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ನಡೆಸಿದರು.
ಗೌರಿಬಿದನೂರು :
![Garuibidanur palm sunday](https://chikkaballapur.com/wp-content/uploads/2024/03/25MarCBP01A-1024x683.jpg)
ಗೌರಿಬಿದನೂರು ನಗರದ ನಾಗಪ್ಪ ಬ್ಲಾಕ್‌ನಲ್ಲಿರುವ ಗರ್ನಿ ಮೆಮೋರಿಯಲ್ ಚರ್ಚ್‌ನಲ್ಲಿ ಖರ್ಜೂರ ಗರಿಗಳ ಹಬ್ಬ ಆಚರಿಸಲಾಯಿತು. ಗೌರಿಬಿದನೂರು ನಗರದ ಬಿ.ಎಚ್.ರಸ್ತೆಯ ನಾಗಪ್ಪ ಬ್ಲಾಕ್‌ನಿಂದ ಬೈಪಾಸ್ ರಸ್ತೆಯವರೆಗೆ ಮೆರವಣಿಗೆ ನಡೆಸಲಾಯಿತು.